ತೋಟಗಾರಿಕೆ ಬೆಳೆಗಳ ಮಾಹಿತಿ ಪಡೆದ ಸದಸ್ಯರು

24mdk04
Published on

ಕುಶಾಲನಗರ: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಕಾರ್ಯವ್ಯಾಪ್ತಿಯ ಗ್ರಾಮಗಳ ಸದಸ್ಯರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಜಕ್ಕಗೀರಿ ಗ್ರಾಮದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪಡೆದ ಪ್ರಗತಿಪರ ರೈತ ವಿಜಯೇಂದ್ರ ಭಟ್ ಅವರ ತೋಟಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು.

ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ನೇತೃತ್ವದಲ್ಲಿ ರೈತರು ವಿಜಯೇಂದ್ರ ಭಟ್ ಅವರ ರಾಸಾಯನಿಕ ಮುಕ್ತ ಕೃಷಿ, ಅಡಕೆ, ಕಾಫಿ, ಏಲಕ್ಕಿ, ಲವಂಗ, ಜಾಯಿಕಾಯಿ, ಮಾವು, ಕಿತ್ತಳೆ, ಸೀಬೆ , ನಿಂಬೆ, ಸೇರಿದಂತೆ 30 ತಳಿಯ ತೋಟಗಾರಿಕೆ ಬೆಳೆಗಳು, ವಿವಿಧ ಹೈಬ್ರೀಡ್ ತಳಿಯ ಹೂ ಗಿಡಗಳ ಬೆಳೆಯುವಿಕೆ, ಅನೇಕ ಉಪ ವಿಭಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

6 ಎಕರೆ ಪ್ರದೇಶದ ಭೂಮಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಸಾವಯುವ ಗೊಬ್ಬರದಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಅನುಸರಿಸಬಹುದಾದ ಕೃಷಿ ವಿಷಯಗಳ ಬಗ್ಗೆ ವಿಜಯೇಂದ್ರ ಭಟ್ ಮಾಹಿತಿ ನೀಡಿದರು.

ಸಹಕಾರ ಸಂಘದ ಉಪಾಧ್ಯಕ್ಷ ಕೆ.ವಿ.ಬಸಪ್ಪ, ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್, ಸಂಘದ ನಿರ್ದೇಶಕರಾದ ಕೆ.ಪಿ.ರಾಜು, ರಾಮಚಂದ್ರ, ಎಸ್.ಎಸ್.ಕೃಷ್ಣ, ನಾಗರಾಜು, ಕೃಷ್ಣಗೌಡ, ಜಯಶ್ರೀ, ರಮೇಶ್, ಕುಮಾರ್, ಪ್ರಗತಿಪರ ರೈತರಾದ ಕೆ.ವಿ.ಸಣ್ಣಪ್ಪ, ನಾಗರಾಜು, ಶಶಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net