

ಕಲಬುರಗಿ: ಪ್ರಸಕ್ತ ೨೦೨೩-೨೪ನೇ ಸಾಲಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಾದ ನುಗ್ಗೆ ಪ್ರದೇಶ ವಿಸ್ತರಣೆಗೆ ಕಲಬುರಗಿ ತಾಲೂಕಿನ ರೈತರು ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.೫೦ ರಷ್ಟು ಇಲಾಖೆಯಿಂದ ಸಹಾಯಧನ ನಿಗದಿಪಡಿಸಿದ್ದು, ಆಸಕ್ತರು ಇಲಾಖೆಯ ನರ್ಸರಿಗಳಲ್ಲಿ ಲಭ್ಯವಿರುವ ನುಗ್ಗೆ ಸಸಿ ಖರೀದಿಸಿ ತೋಟಗಾರಿಕೆ ಬೆಳೆ ಬೆಳೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ, ಮೊ.ಸಂಖ್ಯೆ ಕಲಬುರಗಿ-೯೦೦೮೧೦೧೩೦೩, ಪಟ್ಟಣ-೯೧೬೪೮೩೫೯೧೭, ಫರಹತಾಬಾದ್-೯೬೮೬೨೧೪೧೧೧, ಅವರಾದ (ಬಿ)-೬೩೬೬೫೯೧೬೩೧, ಮಹಾಗಾಂವ್-೯೭೩೮೪೧೬೯೩೦ ಹಾಗೂ ಕಮಲಾಪೂರ-೭೨೫೯೮೬೬೭೨೩ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.