

ಹೊಳೆನರಸೀಪುರ: ಇಲ್ಲಿನ ಹಾಸನ ರಸ್ತೆಯ ಹಿರೇಬೆಳಗುಲಿ ತಿರುವಿನಲ್ಲಿ ಮಂಗಳವಾರ ಸಂಜೆ ಪೆಟ್ರೋಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಡಕೆ ಗಿಡಗಳು ನಾಶವಾಗಿವೆ.
ಈ ಟ್ಯಾಂಕರ್ ಹಾಸನದಿಂದ ಪೆಟ್ರೋಲ್ ತುಂಬಿಕೊಂಡು ಮೈಸೂರಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬುಧವಾರ ಮಧ್ಯಾಹ್ನ ಕ್ರೇನ್ ಮೂಲಕ ಟ್ಯಾಂಕರ್ ಅನ್ನು ರಸ್ತೆಗೆ ತರಲಾಯಿತು. ಬಳಿಕ ಟ್ಯಾಂಕರ್ ಮೈಸೂರಿನತ್ತ ಹೊರಟಿತು.