ತೊಣ್ಣೂರು ಕೆರೆಗೆ ಬಾಗಿನ ಅರ್ಪಣೆ

3-pnp 2
????????????????????????????????????
Published on

ಪಾಂಡವಪುರ: ತಾಲೂಕಿನ ಐತಿಹಾಸಿಕ, ರಾಮಾನುಜಾಚಾರ್ಯರ ಕಾಲದಲ್ಲಿ ನಿರ್ಮಾಣಗೊಂಡಿರುವ ತೊಣ್ಣೂರು ಕೆರೆ ವರುಣನ ಕೃಪೆಯಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಬಳಿಕ ಮಾತನಾಡಿ, ನಾನು ಶಾಸಕನಾದ ಬಳಿಕ ಎರಡನೇ ಬಾರಿಗೆ ಕೆರೆತೊಣ್ಣೂರು ಕೆರೆಗೆ ಬಾಗಿನ ಅರ್ಪಿಸುತ್ತಿದ್ದೇನೆ. ಕೆರೆಯೂ ಈ ಭಾಗದ ಜನ-ಜಾನುವಾರುಗಳ ಕುಡಿಯುವ ನೀರು ಪೂರೈಕೆ ಮಾಡುವ ಜತೆಗೆ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಿ ರೈತರ ಬದುಕಿಗೆ ಆಸರೆಯಾಗಿದೆ. ಕೆರೆತೊಣ್ಣೂರು ಹಾಗೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆ ಮೂಲಕ ಎರಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಢಿದ ಬಳಿಕ ಎರಡು ಕ್ಷೇತ್ರಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ಹೇಮಾವತಿ ನಾಲೆ ಅಚ್ಚುಕಟ್ಟು ವ್ಯಾಪ್ತಿಯ ಅಭಿವೃದ್ಧಿಗಾಗಿ ಕ್ಷೇತ್ರಕ್ಕೆ 35 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕೆಲಸ ಆರಂಭಿಸಲಾಗುವುದು. ಇದಕ್ಕೂ ಮೊದಲು 32 ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದರು.

ಇದೇ ವೇಳೆ ಕೆರೆತೊಣ್ಣೂರು ಅಚ್ಚುಕಟ್ಟು ಸಮಪರ್ಕವಾಗಿ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ರೈತರು ತರಾಟೆ ತೆಗೆದುಕೊಂಡರು. ಹೇಮಾವತಿ ನೀರಾವರಿ ಇಲಾಖೆ ಇಂಜಿನಿಯರ್‌ಗಳಾದ ಗಂಗಾಧರ್, ಶ್ರೀನಾಥ್, ರಾಘವೇಂದ್ರ, ಪುಟ್ಟಮಾಯಿಗೌಡ, ಪುನೀತ್, ಆನಂದ್, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಸದಸ್ಯರಾದ ಭಾರತಿ, ಶಶಿಕಲಾ, ಕೆಂಪೇಗೌಡ, ರೈತಸಂಘ ತಾಲೂಕು ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಚಿಕ್ಕಾಡೆ ಹರೀಶ್, ಕಾರ್ಯದರ್ಶಿ ವೈ.ಪಿ.ಮಂಜು, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಎಸ್.ಹಾಳಯ್ಯ, ಮಾಜಿ ನಿರ್ದೇಶಕ ಕೆ.ಎಸ್.ದಯಾನಂದ್, ಮುಖಂಡರಾದ ಕೋಟಿ ಶಂಕರ, ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net