ತೊಗರಿ ರೈತರ ಪರ ಧ್ವನಿ ಎತ್ತಿದ ಜೆಡಿಎಸ್

Doddappagouda Patil Naribol
Published on

ಕಲಬುರಗಿ: ಜಿಲ್ಲೆ ಸೇರಿ ಹಲವೆಡೆ ತೊಗರಿ ನೆಟೆ ರೋಗದಿಂದ ಹಾಳಾಗಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಜೆೆಡಿಎಸ್ ಶಾಸಕ ಸುರೇಶಬಾಬು ಆಗ್ರಹಿಸಿದರು. ಡಿಸಿ ಕಚೇರಿ ಮುಂದೆ ಮೂರು ದಿನ ಜಿಲ್ಲಾ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಕೈಗೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಪಕ್ಷದ ಶಾಸಕರ ಗಮನಕ್ಕೆ ತಂದು ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಗಮನ ಸೆಳೆಯುವ ಭರವಸೆ ನೀಡಿದ್ದರು. ಅದರಂತೆ ಜೆಡಿಎಸ್ ಶಾಸಕಕಾಂಗ ನಾಯಕ ಸುರೇಶಬಾಬು ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ರೈತರು ಬೃಹತ್ ಹೋರಾಟ ನಡೆಸಿದರೂ ಸರ್ಕಾರ ಗಮನಹರಿಸಲಿಲ್ಲ. ಬೆಳೆ ಹಾನಿಯಿಂದಾಗಿ ಸಂಕಷ್ಟದಲ್ಲಿದ್ದು, ಕ್ವಿಂಟಾಲ್‌ಗೆ ಕನಿಷ್ಠ ೧೦ ಸಾವಿರ ಬೆಂಬಲ ಬೆಲೆ ನೀಡಬೇಕು. ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿ ವಿಷಯವನ್ನು ಗಂಭೀರ ಪರಿಗಣಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ದೊಡ್ಡಪ್ಪಗೌಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net