ತೆರೆದ ಬಾವಿಗೆ ಬಿದ್ದು ಕಾಡೆಮ್ಮೆ ಸಾವು

4sdp3
Published on

ಸಿದ್ದಾಪುರ: ಕ್ಯಾದಗಿ ವಲಯ ಅರಣ್ಯದ ಬಿಳಗಿ ವ್ಯಾಪ್ತಿಯ ಚಪ್ಪರಮನೆಯ ಚನ್ನಖಂಡದಲ್ಲಿ ತೆರೆದ ಬಾವಿಗೆ ಐದು ವರ್ಷದ ಕಾಡೆಮ್ಮೆ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

ಸತ್ತ ಕಾಡೆಮ್ಮೆಯನ್ನು ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತಲಾಗಿದೆ. ಕ್ಯಾದಗಿ ವಲಯ ಅರಣ್ಯಾಧಿಕಾರಿ ಹರೀಶ ಪಿ, ಉಪವಲಯ ಅರಣ್ಯಾಧಿಕಾರಿ ಅಶೋಕ ಪೂಜಾರ್, ವನಪಾಲಕ ಮಾಲತೇಶ ರ್ಬಾ ಹಾಗೂ ಸಿಬ್ಬಂದಿ ಮತ್ತು ಸ್ಥಳೀಯರು ಈ ಸಂದರ್ಭದಲ್ಲಿದ್ದರು. ಪಶುವೈದ್ಯಾಧಿಕಾರಿ ಡಾ. ಶ್ರೇಯಸ್ ರಾಜ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆಯ ಕಾನೂನಿನಂತೆ ಸುಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net