ಬಾವಿಯಲ್ಲಿ ಯುವಕನ ಮೃತದೇಹ ಪತ್

New Project (12)
Published on

ಉಳ್ಳಾಲ: ಕಿನ್ಯ ತೋಟದ ಬಾವಿಯಲ್ಲಿ ಕಿನ್ಯ ಗ್ರಾಮದ ಕಿನ್ಯಗುತ್ತು ನಿವಾಸಿ ಮಿಥುನ್ ಶೆಟ್ಟಿ(32) ಎಂಬುವರ ಮೃತದೇಹ ಪತ್ತೆಯಾಗಿದೆ. ಕಾಲುಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಬೇಕರಿಯಲ್ಲಿ ಉದ್ಯೋಗದಲ್ಲಿದ್ದ ಅವರು, ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಕಿನ್ಯ-ನಾಟೆಕಲ್ ಸಂಪರ್ಕ ರಸ್ತೆಯಂಚಿನ ಖಾಸಗಿ ತೋಟದಲ್ಲಿರುವ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net