

ಬಾಗಲಕೋಟೆ: ಬರವಣಿಗೆಯ ವಿಕಾಸಕ್ಕೆ ಭಾಷೆ ಹಾಗೂ ಓದು ಮುಖ್ಯವಾಗಿದ್ದು ಪತ್ರಕರ್ತನಾಗಲು ತಾಳ್ಮೆ, ಸಂಯಮ, ನಿರಂತರ ವಾಸ್ತವದ ಅಧ್ಯಯನ ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ.ಲೋಕೇಶ ಎಸ್.ಕೆ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಕೌಶಲ್ಯ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಅವರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪತ್ರಿಕೋದ್ಯಮದಲ್ಲಿ ಬರವಣಿಗೆಯಿಂದ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು. ಯಾವುದೇ ವಿಷಯಗಳ ಕುರಿತು ಬರೆಯುವ ಮುನ್ನ ಅದರ ಪೂರ್ವಭಾವಿ ವಿಷಯಗಳನ್ನು ತಿಳಿದುಕೊಂಡಿರಬೇಕು. ಬರವಣಿಗೆ ಬುನಾದಿ ಬಾಲ್ಯದಿಂದಲೇ ಆರಂಭವಾಗಬೇಕು. ಪೂರ್ವಾಗ್ರಹ ಪೀಡಿತರಾಗದೆ ವಾಸ್ತವಿಕ ಪರಿಸ್ತಿತಿಯನ್ನು ಅರ್ಥೈಸಿಕೊಂಡರೆ ಬರವಣಿಗೆ ಮೊನಚಾಗುತ್ತದೆ, ಬರವಣಿಗೆ ಪ್ರಾರಂಭದಲ್ಲಿ ಪ್ರಾದೇಶಿಕವಾಗಿ ಇರುವ ಸಣ್ಣ ವಿಷಯಕಡೆ ಗಮನ ಕೊಡಬೇಕು. ಸಮಾನ್ಯರಂತೆ ಓದದೆ ಆಳವಾದ ಅಧ್ಯಯನ ಮಾಡುವ ಕಲೆ ರೂಡಿಸಿಕೊಳ್ಳಬೇಕು. ಸರಳತೆ, ಸ್ಪಷ್ಟತೆ ಮತ್ತು ನಿಖರತೆ ರೂಢಿಸಿಕೊಂಡರೆ ಒಬ್ಬ ಒಳ್ಳೆಯ ಬರಹಗಾರರಾಗಬಹುದು. ಅನುಭವಗಳನ್ನು ಬರವಣಿಗೆ ರೂಪದಲ್ಲಿತರುವುದನ್ನು ಕಲಿಯಬೇಕು. ಪತ್ರಕರ್ತರಿಗೆ ಕಡಿಮೆ ಮಾತು, ಜಾಸ್ತಿ ತಾಳ್ಮೆ ಬಹಳ ಮುಖ್ಯವಾಗಿದೆ ಮತ್ತು ಕೇವಲ ಒಂದೇಕ್ಷೇತ್ರಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ವಿಧ್ಯಾರ್ಥಿಗಳು ಪ್ರತಿಕ್ರಿಯಿಸುವುದನ್ನುಕಲಿಯಬೇಕು. ಬರಹಗಳು ಆಯಾ ಕಾಲಗಳಲ್ಲಿ ಅದರದೇಯಾದ ವೈಶಿಷ್ಟ್ಯ ಹೊಂದಿದ್ದು, ಅದರಕಡೆಗೆ ಗಮನ ವಹಿಸಬೇಕು, ಬರವಣಿಗೆ ಓದಿಸಿಕೊಂಡು ಹೋಗುವ ರೀತಿ ಬರೆಯುವ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಡಿಜಿಟಲ್‌ಯುಗದಲ್ಲಿ ಇದ್ದರೂ ಮುದ್ರಣ ಮಾಧ್ಯಮದ ಮಹತ್ವ ಕಡಿಮೆಯಾಗಿಲ್ಲ. ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡು ಓದುಗರನ್ನು ಸೆಳೆದಿದೆ, ವಿದ್ಯಾರ್ಥಿಗಳು ಭಾಷಾ ಬಳಕೆಯ ಕೌಶಲ್ಯವನ್ನು ಬೆಳಸಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಐ.ಬಿ.ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದದಲ್ಲಿ ಐಕ್ಯೂಎಸಿ ಘಟಕದ ಸಂಯೋಜ ಕರುಡಾ. ಎ.ಯು.ರಾಠೋಡ, ಪ್ರಾದ್ಯಾಪಕರಾದ ಎಂ.ಪಿ.ದೊಡವಾಡ ಉಪಸ್ಥಿತರಿದ್ದರು.