ತಾಳಿ ತೆಗೆಸಿ ಹಿಂದುಗಳ ಭಾವನೆಗೆ ಧಕ್ಕೆ

Dr.Sudha Halakai
Published on

ಕಲಬುರಗಿ: ನಗರ ಸೇರಿ ಕೆಲವೆಡೆ ನ.೪ ಮತ್ತು ೫ರಂದು ಜರುಗಿದ ಕೆಪಿಎಸ್‌ಸಿ ಪರೀಕ್ಷೆ ವೇಳೆ ಮಹಿಳಾ ಅಭ್ಯರ್ಥಿಗಳ ಕೊರಳಲ್ಲಿನ ಮಂಗಳಸೂತ್ರ, ಕಿವಿಯೋಲೆ, ಕಾಲುಂಗುರ ಮೊದಲಾದವನ್ನು ತೆಗೆದದ್ದು ಅಕ್ಷಮ್ಯ ಅಪರಾಧವಾಗಿದೆ. ನೆಲದ ಸಂಸ್ಕೃತಿಗೆ ಧಕ್ಕೆ ಮಾಡಿದಂತಾಗಿದೆ ಎಂದು ಬಿಜೆಪಿ ಮಾಧ್ಯಮ ಸಮಿತಿ ರಾಜ್ಯ ಸದಸ್ಯೆ ಹಾಗೂ ವೈದ್ಯ ಪ್ರಕೋಷ್ಠದ ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ ಕಿಡಿಕಾರಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳೆಯರ ಮಂಗಳಸೂತ್ರ ತೆಗೆದಿರುವುದು ಅಪವಿತ್ರ ಕೃತ್ಯವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದು, ಹಿಂದು ವಿರೋಧಿ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ನಿಷೇಧಿಸಿದರೂ ಹಿಜಾಬ್‌ಗೆ ಅನುಮತಿ ನೀಡಲಾಗಿದೆ. ಹಿಂದುಗಳ ಕೊರಳಲ್ಲಿನ ತಾಳಿ ತೆಗೆಸುವ ಮೂಲಕ ನೆಲದ ಕಾನೂನು ಹಾಗೂ ಸಂಸ್ಕೃತಿ ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ಸಂಸ್ಕೃತಿಯಲ್ಲಿ ಮಂಗಳಸೂತ್ರವನ್ನು ಗಂಡನ ಮರಣದ ನಂತರ ಅಥವಾ ಆಪರೇಷನ್, ಕೆಲ ವೈದ್ಯಕೀಯ ಪರೀಕ್ಷೆಗಳಿಗಾಗಿ ಮಾತ್ರ ತಗೆಯಲಾಗುತ್ತದೆ. ಮಂಗಳಸೂತ್ರ, ಕಿವಿಯೋಲೆ ಸೇರಿ ಯಾವುದೇ ಆಭರಣ ಧರಿಸಿಕೊಂಡು ಪರೀಕ್ಷಾ ಕೇಂದ್ರದೊಳಗೆ ಬರಬಾರದು ಎಂಬ ನಿಯಮ ಇರಲಿಲ್ಲ. ಆದರೂ ಯಾಕೆ ಹೀಗೆ ವರ್ತಿಸಲಾಯಿತು ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net