ತಹಸೀಲ್ದಾರ್ ಶ್ರೀಧರ್‌ಗೆ ಅಧಿಕಾರ ಹಸ್ತಾಂತರ

2blrp5
Published on

ಬೇಲೂರು: ಬೇಲೂರಿನಲ್ಲಿ ತಹಸೀಲ್ದಾರರಾಗಿ ಎರಡೂವರೆ ವರ್ಷ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ತಹಸೀಲ್ದಾರ್ ಎಂ.ಮಮತಾ, ನೂತನ ತಹಸೀಲ್ದಾರ್ ಶ್ರೀಧರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ತಾಲೂಕು ಕಚೇರಿ ಆವರಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಸಂಜೆ ಮಾಲಾರ್ಪಣೆ ಮಾಡಿ ನೆನಪಿಗಾಗಿ ಗಿಡ ನೆಟ್ಟರು.

ಈ ಸಂದರ್ಭ ನೂತನ ತಹಸೀಲ್ದಾರ್ ಶ್ರೀಧರ್, ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ರವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್, ಆಹಾರ ಇಲಾಖೆಯ ಪುರುಷೋತ್ತಮ್ ಹಾಗೂ ಸಿಬ್ಬಂದಿ ಇದ್ದರು.

ತಹಸೀಲ್ದಾರ್ ಎಂ.ಮಮತಾ ಅವರು ಬೇಲೂರಿಗೆ ಬಂದಾಗಿನಿಂದಲೂ ಇಲ್ಲಿವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರೊಂದಿಗೆ ಹೊಂದಾಣಿಕೆಯಿಂದ ಕಾನೂನು ಮೀರದಂತೆ ಕೆಲಸ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net