ತಹಸೀಲ್ದಾರರಿಂದ ಶಬ್ಬಾಸ್

kldg-29-1
ಬಾಗಲಕೋಟೆ ತಾಲೂಕಿನಲ್ಲಿಯೇ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಪೂರ್ಣ ಗೊಳಿಸಿದ ಶಿಕ್ಷಕ ಲಕ್ಷ÷್ಮಣ ಅಂಕಲಗಿ ಅವರನ್ನು ಬಾಗಲಕೋಟೆ ತಾಲೂಕಾ ತಹಸೀಲ್ದಾರ ವಾಸುದೇವ ವ್ಹಿ.ಸ್ವಾಮಿ ಸತ್ಕರಿಸಿದರು.
Published on

ಬಾಗಲಕೋಟೆ: ನೆಟ್ ವರ್ಕ ಸಮಸ್ಯೆ,ಸರ್ವರ ಇಲ್ಲ ಇದ್ದರೂ ಸ್ಲೂ ಇದೆ, ಮನೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ..ಹೀಗೇ ಅನೇಕ ಸಮಸ್ಯೆ ಅಡತಡೆಗಳ ನಡುವೆಯೂ ಬಾಗಲಕೋಟೆ ತಾಲೂಕಿನಲ್ಲಿಯೇ ನಿಗಽತ ಅವಽಗೂ ಮುನ್ನವೇ ಗಣತಿಕಾರ್ಯವನ್ನು ಸಂಪೂರ್ಣಗೊಳಿಸಿ ಸಾಧನೆ ಮಾಡಿರುವ ಗಣತಿದಾರ ಶಿಕ್ಷಕ ಲಕ್ಷ÷್ಮಣ ಅಂಕಲಗಿ ಅವರನ್ನು ಬಾಗಲಕೋಟೆ ತಹಸೀಲ್ದಾರ ವಾಸುದೇವಸ್ವಾಮಿ ಸತ್ಕರಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ತಮ್ಮ ಅಽಕಾರಿಗಳ ತಂಡದೊAದಿಗೆ ಸೋಮವಾರ ಮಧ್ಯಾಹ್ನ ಗಣತಿದಾರ ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯ ಶಿಕ್ಷಕ ಲಕ್ಷ÷್ಮಣ ಅಂಕಲಗಿ ಅವರು ಗಣತಿಕಾರ್ಯ ಮಾಡುತ್ತಿದ್ದ ಸಮೀಪದ ಅಂಕಲಗಿ ಬಂದು ಖುದ್ದು ಅವರನ್ನು ಬೇಟಿ ಆಗಿ ಸಂತಸ ವ್ಯಕ್ತಮಾಡಿದ ಅವರು ಅವರೀ ಸೇವಾಕಾರ್ಯದ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

೬ ದಿನದಲ್ಲಿ ಪೂರ್ಣಃಗಣತಿ ಕಾರ್ಯ ಸಂಪೂರ್ಣಕ್ಕೆ ಅಕ್ಟೋಬರ ೭ ನೇ ತಾರೀಖನ್ನು ನಿಗಽಮಾಡಿದ್ದರೂ ಲಕ್ಷಣ ಅವರು ಆರಂಭದ ಸಮಸ್ಯೆಗಳ ನಡುವೇಯೂ ತಮಗೆ ನೀಡಿದ್ದ ೯೪ ಮನೆಗಳ ಗುರಿಯನ್ನು ಅರೇಳುದಿನದಲ್ಲಿಯೇ ಅಂದರೆ ಸೆ.೨೯ ರಂದು ಗಣತಿಕಾರ್ಯವನ್ನು ಪೂರ್ಣಗೊಳಿಸಿರುವುದು ಜಿಲ್ಲಾಡಳಿತದ ಹಾಗೂ ತಾಲೂಕು ಆಡಳಿತದ ಮೆಚ್ಚುಗೆಗೆ ಕಾರಣವಾಗಿದೆ.

ಗ್ರೆಡ್-೨ ತಹಸೀಲ್ದಾರ ಎಂ.ಜಿ.ಬಿರಾದಾರ, ಉಪತಹಸೀಲ್ದಾರ ಆರ್.ಆರ್.ಕುಲಕರ್ಣಿ, ಶಿಕ್ಷಣ ಇಲಾಖೆಯ ಸಿಆರ್‌ಪಿ ಮಂಜುನಾಥ ಹೆಡಗಿ, ಕಂದಾಯ ವೃತ್ತ ನಿರೀಕ್ಷಕ ಎಂ.ಕೆ.ಮಲಕ್ಕನವರ, ಮುಖಂಡರಾದ ಬಸವರಾಜ ಬಿಲಕೇರಿ, ಲಚ್ಚಪ್ಪ ಪರಚನಗೌಡರ, ವಿಠಲ ಗೌಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net