ದೇಶ ಅಭಿವೃದ್ಧಿಗೆ ಕೈಜೋಡಿಸಲಿ

19
Published on

ಇಟಗಿ: ನಿರಂತರ ಪರಿಶ್ರಮ, ಉನ್ನತ ಗುರಿಯಿಂದ ರಾಷ್ಟ್ರದ ಪ್ರಗತಿಗೆ ಶ್ರಮಿಸಲು ಯುವಜನತೆ ಸಿದ್ದರಾಗಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಬೀಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಒಕ್ಕೂಟ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸೇರಿ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಘಟಕ ಹಾಗೂ ಸಾಂಸ್ಕೃತಿಕ ಒಕ್ಕೂಟ ಪೂರಕವಾಗಿವೆ. ವ್ಯಕ್ತಿಯ ಏಳಿಗೆಯಲ್ಲಿ ಶಿಕ್ಷಣದ ಪಾತ್ರ ಮುಖ್ಯ ಎಂದರು.

ಗ್ರಾಪಂ ಅಧ್ಯಕ್ಷ ಸಂತೋಷ ಕಾಶಿಲಕರ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ನಾಸೀರ್‌ಅಹ್ಮದ್ ಜಂಗುಭಾಯಿ ಅಧ್ಯಕ್ಷತೆ ವಹಿಸಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಯುನಿವರ್ಸಿಟಿ ಬ್ಲೂ ಕಾರ್ತಿಕ ಪಾಟೀಲ ಹಾಗೂ ದೇಮಕ್ಕ ಹಿಂಡಲ್ಕರ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಸದಸ್ಯರಾದ ಜಯವಂತ ಕಾಳಿ, ಜ್ಞಾನೇಶ್ವರ ಪಾಳೆಕರ, ಅರುಣಾ ಮಾಲಬನ್ನವರ ಹಾಗೂ ಮಲಿಕಾರ್ಜುನ ಇನಾಮದಾರ, ದೀಪಾ ಪಾಟೀಲ, ಸಿ.ಬಿ. ಹಡಪದ, ನಾರಾಯಣ ಸುಣಗಾರ, ಸದಾಶಿವ ಪಾವಸ್ಕರ, ಡಾ.ಸವಿತಾ ಜವಳಿ ಇತರರು ಇದ್ದರು. ಆಸೀಪ್ ಮುಲ್ಲಾ ಸ್ವಾಗತಿಸಿದರು. ಡಾ.ಮಲಿಕಾರ್ಜುನ ಮೂಲಿಮನಿ ನಿರೂಪಿಸಿದರು. ಡಾ.ವಿಜಯಲಕ್ಷ್ಮೀ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net