ತಲೆ ಮೇಲೆ ಕಲ್ಲು ಹಾಕಿ ಕೊಲೆ

Murder (2) (1)
Published on

ಸವದತ್ತಿ: ಪಟ್ಟಣದ ಎಪಿಎಂಸಿ ಆಡಳಿತ ಕಚೇರಿ ಹಿಂದಿನ ಪ್ರಚಾರ ಕೋಣೆ ಹತ್ತಿರ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಮಕ್ತುಮಸಾಬ್ ಮಾಬುಸಾಬ್ ನದ್ಾ (34) ಕೊಲೆಗೀಡಾದವ.

ಸವದತ್ತಿ ತಾಲೂಕಿನ ಮುನವಳ್ಳಿಯ ರಫಿಕ್ ಅಬ್ದುಲಸಾಬ್ ಮೆಣಸಿನಕಾಯಿ (26) ಕೊಲೆ ಆರೋಪಿ. ಬುಧವಾರ ಇವರಿಬ್ಬರೂ ಚುಳಕಿ ಗ್ರಾಮದಲ್ಲಿ ಗೌಂಡಿ ಕೆಲಸ ಮಾಡಿ ರಾತ್ರಿ ಸವದತ್ತಿಯ ಎಪಿಎಂಸಿಗೆ ಬಂದಿದ್ದಾರೆ. ಯಾವುದೋ ವಿಷಯಕ್ಕೆ ಜಗಳ ಮಾಡಿದ್ದಾರೆ.

ಜಗಳವಾದ ನಂತರ ಮಕ್ತುಮಸಾಬ್ ಮಲಗಿದ್ದಾಗ ತಲೆ ಮೇಲೆ ಕಲ್ಲು ಹಾಕಿ ಆರೋಪಿ ರಫಿಕ್ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net