ತರಬೇತಿ ಕೇಂದ್ರಕ್ಕೆ ಡಿಸಿ ಸುನೀಲ್‌ಕುಮಾರ ಭೇಟಿ ಪರಿಶೀಲನೆ

bkt-11-1
ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮತಗಟ್ಟೆ ಅಽಕಾರಿ ಹಾಗೂ ಸಹಾಯಕ ಮತಗಟ್ಟೆ ಅಽಕಾರಿಗಳಿಗೆ ಹಮ್ಮಿಕೊಂಡ ಪ್ರಥಮ ಹಂತದ ತರಬೇತಿ ಕೇಂದ್ರಕ್ಕೆ ಜಿಲ್ಲಾಽಕಾರಿ ಪಿ.ಸುನೀಲ್‌ಕುಮಾರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಬಾಗಲಕೋಟೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮತಗಟ್ಟೆ ಅಽಕಾರಿ ಹಾಗೂ ಸಹಾಯಕ ಮತಗಟ್ಟೆ ಅಽಕಾರಿಗಳಿಗೆ ಹಮ್ಮಿಕೊಂಡ ಪ್ರಥಮ ಹಂತದ ತರಬೇತಿ ಕೇಂದ್ರಕ್ಕೆ ಜಿಲ್ಲಾಽಕಾರಿ ಪಿ.ಸುನೀಲ್‌ಕುಮಾರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಽಕಾರಿಗಳು ತರಬೇತಿಗೆ ಆಗಮಿಸಿದ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಽಕಾರಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಪ್ರತಿಯೊಂದು ತರಬೇತಿ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಸುನೀಲ್‌ಕುಮಾರ ಮಾತನಾಡಿ, ಯಾವುದೇ ಅಡೆತಡೆ ಇಲ್ಲದೇ ಮತದಾನ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮೊದಲನೇ ಹಂತದ ತರಬೇತಿ ನೀಡಲಾಗುತ್ತಿದ್ದು, ತಾವುಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸಂಪೂರ್ಣ ತರಬೇತಿ ಪಡೆಯಲು ಸೂಚಿಸಿದರು.

ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ೨೬೩ ಮತಗಟ್ಟೆಗಳಿದ್ದು, ಹೆಚ್ಚುವರಿ ಒಂದು ಮತಗಟ್ಟೆ ಸೇರಿ ಒಟ್ಟು ೨೬೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೫೭೬ ಮತಗಟ್ಟೆ ಅಽಕಾರಿಗಳು, ೩೯೭ ಸಹಾಯಕ ಮತಗಟ್ಟೆ ಅಕಾರಿಗಳು ಸೇರಿ ಒಟ್ಟು ೯೭೩ ಜನರಿಗೆ ತರಬೇತಿ ನೀಡಲಾಯಿತು.

ಈ ಭೇಟಿ ಸಮಯದಲ್ಲಿ ಬಾಗಲಕೋಟೆ ಉಪವಿಭಾಗಾಽಕಾರಿ ಆಗಿರುವ ಬಾಗಲಕೋಟೆ ಮತಕ್ಷೇತ್ರದ ಚುನಾವಣಾಽಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net