ತಮ್ಮ ಸುರಕ್ಷತೆ ಬಗ್ಗೆ ಆತಂಕ ಬೇಡ

bkt-2-16
ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಬುಧವಾರ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ ಕಾರಂತ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Published on

ಬಾಗಲಕೋಟೆ: ಹೋಳಿ ಹಬ್ಬದ ಹಲಿಗೆ ಬಾರಿಸುವ ವಿಚಾರವಾಗಿ ನಡೆದಿದ್ದ ಗಲಾಟೆಯಲ್ಲಿ ಗಾಯಗೊಂಡಿದ್ದವನ್ನು ಬುಧವಾರ ಹಿಂದೂ ಜಾಗರಣ ವೇದಿಕೆ ಹಿರಿಯ ಮುಖಂಡ ಜಗದೀಶ ಕಾರಂತ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಫೆ. ೨೭ ರಂದು ನವನಗರ ಸೆಕ್ಟರ ನಂಬರ ೪೮ ರಲ್ಲಿ ಹಲಿಗೆ ಬಾರಿಸುವ ವಿಚಾರವಾಗಿ ಎರಡು ಗುಂಪುಗಳ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಒಂದು ಗುಂಪಿನ ನಾಲ್ವರು ಗಾಯಗೊಂಡಿದ್ದರು. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳುಗಳಿಂದ ಅಂದು ನಡೆದಿದ್ದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಧೈರ್ಯವಾಗಿ ಇರುವಂತೆ, ತಮ್ಮ ಸುರಕ್ಷತೆ ಬಗ್ಗೆ ಆತಂಕ ಬೇಡ ಎಂದು ತಿಳಿಸಿದರು.

ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸೆಕ್ಟರ ನಂಬರ ೪೮ ರಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ. ಬಹುಸಂಖ್ಯಾತ ಇರುವ ಸಮುದಾಯದಿಂದ ನಮ್ಮ ಸಂಪ್ರದಾಯದ ಹಬ್ಬ ಆಚರಣೆಗೆ ದಕ್ಕೆ ಉಂಟಾಗಿದೆ. ಇದನ್ನು ಸಹಿಸಲು ಆಗಲ್ಲ. ಅವರು ಮಾಡಿದಂತೆಯೇ ನಾವು ತಿರುಗಿ ಬಿದ್ದರೆ ಅವರ ಪರಿಸ್ಥಿತಿ ಏನಾಗುತ್ತದೆ ಎಂದು ವಿಚಾರ ಮಾಡಬೇಕು. ಹಲಿಗೆ ಬಾರಿಸುವುದು ಹಿಂದಿನಿಂದ ನಡೆದು ಬಂದಿದೆ. ಅವರ ಹಬ್ಬದ ವೇಳೆಯೂ ನಾವು ಹೀಗೆಯೇ ಮಾಡಿದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.

ಮೊನ್ನೆ ನಡೆದ ಘಟನೆಯಲ್ಲಿ ನಮ್ಮವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧಪಟ್ಟಂತೆ ೩೦ಕ್ಕೂ ಹೆಚ್ಚು ಜನರ ಮೇಲೆ ದೂರು ಕೊಟ್ಟಿದ್ದರೂ ಪೊಲೀಸರು ಈ ವರೆಗೂ ಎಲ್ಲರನ್ನು ಬಂಽಸಿದೇ ಕೇವಲ ಇಬ್ಬರು ಮೂವರನ್ನು ಬಂಧಿಸಿದ್ದಾರೆ. ಒಂದು ವಾರದ ಒಳಗಾಗಿ ಎಲ್ಲ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net