

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಕಡಿತಗೊಳಿಸಿ, ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಕೊಡಲು ಮುಂದಾದ ಕಾವೇರಿ ನೀರಾವರಿ ನಿಗಮ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ನದಿಗಿಳಿದು ಪ್ರತಿಭಟಿಸಿದರು.
ಪಟ್ಟಣದ ವೆಲ್ಲೆಸ್ಲಿ ಹಳೇ ಸೇತುವೆ ಸಮೀಪ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ, ನಾಡಧ್ವಜ ಹಾಗೂ ಪ್ರತಿಭಟನಾ ಫಲಕಗಳೊಂದಿಗೆ ಕಾವೇರಿ ನದಿಗೆ ಇಳಿದು ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಮರವೇ ಸಂಘಟನಾ ಕಾರ್ಯದರ್ಶಿ ಮೈಲಾರಿ ಪುರುಷೋತ್ತಮ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್, ಕಾರ್ಯಧ್ಯಕ್ಷ ಪ್ರಮೋದ್ ಕುಮಾರ್, ಸಂಚಾಲಕ ಕೂಡಲ ಕುಪ್ಪೆ ಶಂಕರೇಗೌಡ, ರೈತ ವಿಭಾಗ ಸಂಚಾಲಕ ಕುಮಾರ್, ಪದಾಧಿಕಾರಿಗಳಾದ ಜ್ಞಾನೇಶ್, ಛಾಯಾದೇವಿ, ಗೌರಮ್ಮ, ಸೌಭಾಗ್ಯ, ಭಾಗ್ಯಮ್ಮ ಇತರರು ಭಾಗಿಯಾಗಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ವೇಳೆ ಪೊಲೀಸರು ಭಿಗಿ ಭದ್ರತೆ ಒದಗಿಸಿದ್ದರು.