ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

bkt-5-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಅಂಬಿಗ ತಳವಾರ ಜಾತಿಗೆ ಸೇರಿದವರು ಎಸ್ಟಿ ಜಾತಿ ಪ್ರಮಾಣ ಪಡೆದು ಮೂಲ ಎಸ್ಟಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಸಮಾಜ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಯಾವುದೇ ಕಾರಣಕ್ಕೂ ಈ ರೀತಿ ತಪ್ಪು ನಡೆಗೆ ಅವಕಾಶ ನೀಡಬಾರದು. ಸುಳ್ಳು ದಾಖಲೆ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಹಾಗೂ ನೀಡುವ ಅಽಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಮಾಡುತ್ತಿರುವವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿಸಲಾಗುವುದು. ಕುಲಶಾಸಿöÃಯ ಅಧ್ಯಯನ, ಸರ್ಕಾರ ವರದಿ, ಕೋರ್ಟ ನಿರ್ದೇಶನ ಇಲ್ಲದೇ ತಪ್ಪಾಗಿ ಬಿಂಬಿಸುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ರಾಜು ನಾಯ್ಕರ ಮಾತನಾಡಿ, ತಳವಾರ ಜಾತಿಗೆ ಸೇರಿದ ಚನ್ನಪ್ಪ ಸದಾಶಿವ ಅಂಬಿ ಹಾಗೂ ಅವರ ಕುಟುಂಬಸ್ಥರು ಕೂಡಾ ಸುಳ್ಳು ದಾಖಲೆ ನೀಡಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಮುಧೋಳ ತಾಲೂಕಿನ ಗಿರಿಗಾಂವ ನಿವಾಸಿಯಾದ ಇವರು ಮೂಲತಃ ಅಂಬಿಗ ಸಮಾಜಕ್ಕೆ ಸೇರಿದವರು. ಹಿಂದುಳಿದ ವರ್ಗ ಪ್ರವರ್ಗ-೧ ರಲ್ಲಿ ಬರುತ್ತಾರೆ. ಆದರು ತಪ್ಪು ಮಾಹಿತಿ ನೀಡಿ ಜಾತಿ ಪ್ರಮಾಣ ಪಡೆದುಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಜಿಲ್ಲಾಽಕಾರಿ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ೨೦೨೨ ರಲ್ಲಿ ಜಾತಿ ಪ್ರಮಾಣ ಪಡೆದಿರುವುದು ಅಸಿಂಧುಗೊಳಿಸಿದೆ. ಅಲ್ಲದೆ ಮುಧೋಳ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಮೀನಿನ ಮೇಲೆ ಹೊರಗೆ ಇದ್ದಾರೆ. ೨ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಉಲ್ಲಂöಸಿ ವಾಲ್ಮೀಕಿ ಜಾತಿ ಹೆಸರು ಹೇಳಿ ನಿಂದನೆ ಮಾಡಿದ್ದಾರೆ. ನಿಜವಾದ ಪರಿಶಿಷ್ಠ ಪಂಗಡ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ.

ಜಿಲ್ಲಾಽಕಾರಿ, ಜಿಲ್ಲಾ ಪೊಲೀಸ್ ವರಿವರಿಷ್ಠಾಽಕಾರಿ ಇವರ ಮೇಲೆ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ನಾವಂತು ದೂರು ನೀಡುವುದು ನಿಶ್ಚಿತ. ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಆದರೇ ಸಮುದಾಯ ವಿರುದ್ಧ ಟೀಕೆ ಸಹಿಸುವುದಿಲ್ಲ. ಅನ್ಯಾಯ ಒಪ್ಪುವದಿಲ್ಲ ಎಂದು ಎಚ್ಚರಿಕೆ ನೀಡಿ ಚನ್ನಪ್ಪ ಅಂಬಿ ಅವರ ಜಾತಿ ಪ್ರಮಾಣ ದಾಖಲಾತಿ ಹಾಗೂ ಇನ್ನಿತರ ದಾಖಲಾತಿ ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪ ಗ್ಯಾದಿಗೇರಿ, ಲಕ್ಷ÷್ಮಣ ಮಾಲಗಿ, ಪ್ರಕಾಶ ನಾಯ್ಕರ, ಹೇಮಂತ ಚೂರಿ, ರವಿ ಪುಂಗಿನ, ಮಹಾದೇವ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net