ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ

30 dnd1
Published on

ದಾಂಡೇಲಿ: ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಫಣಸೋಳಿಯ ಪ್ರಕಾಶ ಸಡೇಕರ, ಕೃಷ್ಣ ಪ್ರಕಾಶ ಸಡೇಕರ ಹಾಗೂ ದೇವರಾಜ ಚಂದ್ರಕಾಂತ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶ ಹಳಿಯಾಳ ವಿಭಾಗದ ಉಪ ಅರಣ್ಯಾಧಿಕಾರಿಗಳ ಸಂಘ ಹಾಗೂ ದಾಂಡೇಲಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ ಕಚೇರಿಯ ಶಿರಸ್ತೇದಾರ ಗೋಪಿ ಚವ್ಹಾಣ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸ್ಥಳೀಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯ್್ಕ ಉಪಾಧ್ಯಕ್ಷ ಎಂ.ಎಸ್. ಮಾಲೋದೆ, ಸಹ ಕಾರ್ಯದರ್ಶಿ ಗೌಡಪ್ಪ ಬನಕಾದಿನ್ನಿ, ಸದಸ್ಯರಾದ ಪ್ರವೀಣ ನಾಯ್್ಕ ಬಸವರಾಜ ಅಲಗೇರಿ, ಸಂಘದ ರಾಜ್ಯ ಪರಿಷತ್ ಸದಸ್ಯ ಪಿ.ಆರ್. ರಾಣೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net