ತಂಬಾಕು ಹರಾಜು ಮಾರುಕಟ್ಟೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಭೇಟಿ

HUN-OCT-16-4(LAKSHMAN VISIT TO TOBACCO MARKET)
Published on

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬುಧವಾರ ಭೇಟಿ ನೀಡಿ ಹರಾಜು ಚಟುವಟಿಕೆ ಪರಿಶೀಲಿಸಿದರು.

ಎಂ.ಲಕ್ಷ್ಮಣ್ ಮಾತನಾಡಿ, ಇಲ್ಲಿ ರೈತರ ಸಮಸ್ಯೆ ತಿಳಿದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳ ಮೂಲಕ ತಿಳಿಸಲು ಭೇಟಿ ನೀಡಿದ್ದೇನೆ. ಇಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ತಂಬಾಕು ಹರಾಜು ಮಾರುಕಟ್ಟೆ ಅಧೀಕ್ಷರಾದ ಸಿ. ಆರ್.ಮೀನಾ, ಸಿದ್ದರಾಜು, ಪ್ರಭಾಕರ್, ಕಾಫ್ ಸಮಿತಿ ಸದಸ್ಯೆ ಕೆ.ಎನ್.ಕಲ್ಪನಾ ಬೋಮ್ಮೇಗೌಡ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಚಿನ್ನವೀರಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ರೈತ ಮುಖಂಡರಾದ ಮೋದೂರು ಶಿವಣ್ಣೇಗೌಡ, ಬೋಮ್ಮೆಗೌಡ, ಸೋಮು, ಎಸ್ ಶೃಂಗಾರ್, ಸಂಜು, ಅಶೋಕ್, ಮಹೇಶ್, ಅರುಣ್ ಕುಮಾರ್ ಮಧು, ವಿನಯ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net