

ಬಾಗಲಕೋಟೆ: : ತಂದೆ-ತಾಯಿ, ಗ್ರಾಮ ದೈವಗಳು ಹಾಗೂ ಸ್ಥಳೀಯವಾಗಿ ಗುರುಮೂಲದ ಆರಾಧನೆ ಮಾಡಿ. ಎಲ್ಲೆಲ್ಲೋ ಸುತ್ತಾಡುವ ನೀವು, ನಿಮ್ಮ ಊರಲ್ಲಿ ಇರುವ ಗುರುಪೀಠಗಳ ಕಡೆಗೆ ಹೆಚ್ಚು ಹೋಗಲ್ಲ. ಈಗ ನಾವು ನಾಗಾಸಾಧುಗಳು ಇಳಕಲ್ಲ ನಗರದಲ್ಲಿ ಇರುವ ಪವಿತ್ರಿ ವಿಜಯಮಹಾಂತ ಗದ್ದುಗೆ ಹುಡುಕೊಂಡು ಬಂದಿದ್ದೇವೆ. ಹೀಗಾಗಿ ಅದರ ಮಹತ್ವ ಎಂಥದ್ದಿದೆ ಎಂದು ನೀವು ತಿಳಿದುಕೊಳ್ಳಿ.
ಹೀಗೆಂದೆ ಇಳಕಲ್ಲ ನಗರದಲ್ಲಿ ತಮ್ಮ ಆಶೀರ್ವಾದ ಕೋರಿ ಬಂದಿದ್ದ ಯುವಕರಿಗೆ ಕುಂಭಮೇಳದಿ0ದ ಆಗಮಿಸಿದ್ದ ನಾಗಾಸಾಧು ಧನಂಜಯ ಗಿರಿಜೀ ಅವರ ಕಿವಿಮಾತು ಇದು. ಇಳಕಲ್ಲ ನಗರಕ್ಕೆ ಆಗಮಿಸಿದ್ದ ನಾಗಾಸಾಧು ಅವರನ್ನು ಭೇಟಿ ಮಾಡಿದ ಯುಕವರಿಗೆ, ಮಠ, ಮಂದಿರಗಳು ಹಾಗೂ ತಂದೆ-ತಾಯಿ ಮಹತ್ವ ತಿಳಿಸಿರು.
ನೀವುಗಳು ನಾಗಾಸಾಧುಗಳನ್ನು ಹುಡುಕೊಂಡು ಹೋಗುತ್ತೀರಿ, ಅವರಿಂದ ಆಶೀರ್ವಾದ ಕೇಳುತ್ತೀರಿ. ಆದರೆ, ನಾವು ನಿಮ್ಮ ಇಳಕಲ್ಲ ನಗರದಲ್ಲೆ ಇರುವ ಅತ್ಯಂತ ಪವಿತ್ರ ಮತ್ತು ಶಕ್ತಿ ಪೀಠ ಇರುವ ವಿಜಯ ಮಹಾಂತೇಶ ಗದ್ದುಗೆ ಹುಡುಕಿಕೊಂಡು ಬಂದಿದ್ದೇವೆ. ಇಲ್ಲಿ ಇರುವ ಯುವಕರ ಪೈಕಿ ಎಷ್ಟು ಜನ ಮಠಕ್ಕೆ ಹೋಗಿ ಬರುತ್ತೀರಿ? ಇಲ್ಲೆ ಇರುವ ಶಕ್ತಿ ಪೀಠಕ್ಕೆ ನಡೆದುಕೊಂಡರೆ ನಿಮಗೆ ಆಶೀರ್ವಾದ ಸಿಗುತ್ತದೆ. ಹುಬ್ಬಳ್ಳಿ ಸಿದ್ಧಾರೂಢ ಮಠ, ಇಳಕಲ್ಲ ವಿಜಯ ಮಹಾಂತ ಮಠ ದೊಡ್ಡ ಶಕ್ತಿ ಹೊಂದಿದೆ ಎಂದು ಹೇಳಿದರು.
ನೀವುಗಳು ಪ್ರತಿ ದಿನ ಮಠಕ್ಕೆ ಹೋಗಿ ಅಲ್ಲಿ ಕಸಗೂಡಿಸಿ ಬನ್ನಿ, ಆಗ ನಿಮ್ಮ ಕರ್ಮ ಕಳೆದುಹೋಗುತ್ತದೆ. ಕಸಗೂಡಿಸಿ ಬನ್ನಿ ನಿಮಗೆ ಆ ಅಜ್ಜನೆ ಆಶೀರ್ವಾದ ನೀಡುತ್ತಾನೆ ಎಂದ ನಾಗಸಾಧು, ಇಳಕಲ್ಲ ಸೀರೆ ಮಹತ್ವವನ್ನು ಹೇಳಿಕೊಟ್ಟರು. ನಿಮ್ಮೂರ ಸೇರೆ ಎಷ್ಟೊಂದು ಚಂದ. ಹಾಗೆಯೇ ಅಷ್ಟೆ ಚಂದ ಇದೆ. ಆ ಚಂದವನ್ನು ನೀವು ಗುಟಕಾ ಹಾಕಿಕೊಂಡು ಎಲ್ಲೆಂದರಲ್ಲಿ ಉಗುಳಿ ಹಾಡುಬೇಡಿ. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ. ಮುಖ್ಯವಾಗಿ ನಿಮಗೆಲ್ಲ ಗುರುಬಲ ಬೇಕು. ಗುರುಬಲ ಎಂದರೆ ಸದ್ಗುರು ಆರಾಧನೆ. ಅದು ನಿಮ್ಮೂರಲ್ಲೆ ಇದೆ ಎಂದು ಎಂದು ತಿಳಿಸಿದರು.