ತಂದೆ ಅಗಲಿದ ದುಃಖದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಾಲಕಿ

bkt-05-12 (1)
ಅಕ್ಷತಾ ತಳವಾರ
Published on

ಬಾಗಲಕೋಟೆ: ಮನೆಯಲ್ಲಿ ತಂದೆಯ ಶವ ಇದೆ. ಮಗಳಿಗೆ ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ ಇದೆ. ಮನದಲ್ಲಿ ಎಷ್ಟೇ ದುಃಖ ಇದ್ದರೂ ಕೆಲ ಗಂಟೆ ಅದೆಲ್ಲವನ್ನು ನುಂಗಿಕೊAಡು ಗಟ್ಟಿ ಮನಸ್ಸು ಮಾಡಿದ ವಿದ್ಯಾರ್ಥಿನಿ ಪರೀಕ್ಷೆ ಬರೆದು ಬಂದು, ಬಳಕ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಮನಕಲುಕ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಲಕಮಾಪುರ ಗ್ರಾಮದ ಅಕ್ಷತಾ ತಳವಾರ ತಂದೆ ಅಗಲಿದ ನೋವಿನ ನಡುವೆಯೂ ಮನೆಯವರು ಹಾಗೂ ಶಿಕ್ಷಕರು ಧೈರ್ಯ ತುಂಬಿದ್ದರಿAದ ಬಾಲಕಿ ಗಟ್ಟಿ ಮನಸ್ಸು ಮಾಡಿ ಪರೀಕ್ಷೆ ಬರೆದಿದ್ದಾಳೆ. ಗ್ರಾಮದ ವಾಟರ್ ಮನ್ ಆಗಿದ್ದ ಸಣ್ಣ-Àಕೀರಪ್ಪ ತಳವಾರ ಗುರುವಾರ ರಾತ್ರಿ ಸಾವನ್ನಪ್ಪಿದ್ದರು. ಬೆಳಗ್ಗೆ ಶುಕ್ರವಾರ ಎಸ್ಸೆಸ್ಸೆಲ್ಸಿ ಹಿಂದಿ ವಿಷಯದ ಕೊನೆ ಪರೀಕ್ಷೆ ಇತ್ತು. ತಂದೆಯನ್ನು ಅಪಾರವಾಗಿ ಹಚ್ಚಿಕೊಂಡಿದ್ದ ಅಕ್ಷತಾ ಪರೀಕ್ಷೆಗೆ ಹೋಗಲು ನಿರಾಕರಿಸಿದ್ದಳು.

ಈ ವಿಚಾರ ತಿಳಿದು ವಿದ್ಯಾರ್ಥಿನಿಯ ಚಿಕ್ಕಪ್ಪ, ದೊಡ್ಡಪ್ಪ ಹಾಗೂ ಶಿಕ್ಷಕರು ಪರೀಕ್ಷೆ ಬರೆಯಲು ಉತ್ತೇಜನ ನೀಡಿದರು. ನಿನ್ನ ಮೇಲೆ ತಂದೆಗೆ ಅಪಾರ ಪ್ರೀತಿ ಇತ್ತು. ಅವರ ಆಸೆಯಂತೆ ನೀನು ಪರೀಕ್ಷೆ ಬರೆಯಬೇಕು ಎಂದು ಹೇಳಿದರು. ಹೀಗಾಗಿ ತಂದೆಯನ್ನು ನೆನೆಸಿಕೊಳ್ಳುತ್ತಲೇ ಪರೀಕ್ಷೆ ಬರೆದಿದ್ದಾಳೆ.

ಲಕಮಾಪುರ ಗ್ರಾಮದ ಅಕ್ಷತಾ ಪರೀಕ್ಷಾ ಕೇಂದ್ರವೂ ಪಕ್ಕದ ಹೆಬ್ಬಳ್ಳಿ ಗ್ರಾಮದ ಬಿ.ಸಿ.ಗದ್ದಿಗೌಡರ ಸರ್ಕಾರಿ ಪ್ರೌಢಶಾಲೆಯಲ್ಲಿ ಇದ್ದಿದ್ದರಿಂದ ಬೆಳಗ್ಗೆ ೧೦ ರಿಂದ ೧೧ ಗಂಟೆ ವರೆಗೂ ಪರೀಕ್ಷೆ ನಡೆಯಲಿತ್ತು. ಶುಕ್ರವಾರ ಕೊನೆಯ ಪರೀಕ್ಷೆ ಹಿಂದಿ ವಿಷಯ ಇದ್ದರಿಂದ ವಿದ್ಯಾರ್ಥಿನಿಗೆ ಹೆಬ್ಬಾಳಕ್ಕೆ ಬಂದು ಪರೀಕ್ಷೆ ಬರೆದು ಬಳಿಕ ತಂದೆಯ ಅಂತ್ಯಸ0ಸ್ಕಾರಕ್ಕೆ ತೆರಳಿದ್ದಾಳೆ.

ಈ ಬಗ್ಗೆ ಮಾತನಾಡಿದ ಅಕ್ಷತಾ, ನನಗೆ ತಂದೆಗಿAತ ಪರೀಕ್ಷೆ ಮುಖ್ಯವಾಗಿರಲಿಲ್ಲ. ಆದರೆ, ಮನೆಯವರು ಮತ್ತು ಶಿಕ್ಷಕರು ಪ್ರೋತ್ಸಾಹಿಸಿದ್ದರಿಂದ ಪರೀಕ್ಷೆಗೆ ಹೋದೆ. ಪರೀಕ್ಷೆ ಬರೆಯುವಾಗಿ ತಂದೆಯೇ ಮುಖವೇ ಮುಂದೆ ಬರುತ್ತಿತ್ತು. ಪ್ರಶ್ನೆಗಳಿಗೆ ಉತ್ತರ ನೆನಪಿಸಿಕೊಳ್ಳುವಾಗಲೂ ತಂದೆಯ ಮುಖವೇ ಕಾಣಿಸಿಕೊಳ್ಳುತ್ತಿತ್ತು. ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು. ಆ ವೇಳೆ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು ನನಗೆ ಧೈರ್ಯ ತುಂಬಿದರು. ಹೀಗಾಗಿ ಪರೀಕ್ಷೆ ಮುಗಿಯುತ್ತಿದ್ದಂತೆ ಓಡೋಡಿ ಮನೆಗೆ ಬಂದೆ. ನಂತರ ಇಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ತಿಳಿಸಿದಳು.

ಮೃತ ಸಣ್ಣ-Àಕೀರಪ್ಪ ಅವರ ಮೃತರಾದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ಅಕ್ಷತಾ ಅವರ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಇಂಥ ದುಃಖದಲ್ಲೂ ಸಹ ಅಕ್ಷತಾ ಗಟ್ಟಿತನ ಮಾಡಿ ಪರೀಕ್ಷೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಸಣ್ಣ-Àಕೀರಪ್ಪ ವಾಟರ್ ಮನ್ ಆಗಿದ್ದು, ಇದೀಗ ಆ ಕೆಲಸವನ್ನು ಅವರ ಹಿರಿಯ ಪುತ್ರನಿಗೆ ಕೊಡೆಸಲು ಪ್ರಯತ್ನಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net