ಡೀಮ್ಡ್ ಫಾರೆಸ್ಟ್ ವಿಚಾರವೇ ನಿಯಮಬಾಹಿರ

ಡೀಮ್ಡ್ ಫಾರೆಸ್ಟ್ ವಿಚಾರವೇ ನಿಯಮಬಾಹಿರ
Published on

ವಿರಾಜಪೇಟೆ: ರಾಜ್ಯದ ಅರಣ್ಯ ಭೂಮಿಗಳ ಸಮಗ್ರ ದಾಖಲೀಕರಣಕ್ಕಾಗಿ ಅಧ್ಯಯನ ಸರಿ. ಆದರೆ, ಪರಿಭಾವಿತ ಅರಣ್ಯದ ಅಧ್ಯಯನ ಎನ್ನುವುದು ಸರಿಯಲ್ಲ. ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ವಿಚಾರವೇ ನಿಯಮಬಾಹಿರವಾಗಿದೆ ಎಂದು ಕರ್ನಾಟಕ ಕಾಫಿ ರೈತರ ಸಂಘ ಕೊಡಗು ಜಿಲ್ಲಾ ಘಟಕ ಆರೋಪಿಸಿತು.

ಕಾಫಿ ರೈತ ಸಂಘ ಸಿಎಫ್‌ಎಫ್‌ಐಗೆ ನೋಂದಾಯಿತ ಕೊಡಗು ಜಿಲ್ಲಾ ಘಟಕದ ವಿರಾಜಪೇಟೆಯ ಕಚೇರಿಯಲ್ಲಿ ಶುಕ್ರವಾರ ಸಂಘದ ಸದಸ್ಯ ಡಾ.ದುರ್ಗಾಪ್ರಸಾದ್ ಮಾತನಾಡಿ, ಪರಭಾವಿತ ಅರಣ್ಯ(ಡೀಮ್ಡ್ ಫಾರೆಸ್ಟ್) ವಿಚಾರವೇ ನಿಯಮಬಾಹಿರ ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನಂತರವೂ ಈ ವಿಚಾರದೊಂದಿಗೆ ರಾಜ್ಯ ಸರ್ಕಾರ ಮುಂದುವರೆಯುತ್ತಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ರಾಜ್ಯ ಸಕಾರ ನ್ಯಾಯಲಯದ ತೀರ್ಪನ್ನು ಕಡೆಗಣಿಸುತ್ತಿದೆ. ಸರ್ಕಾರದ ಈ ವರ್ತನೆಯೇ ಸಿ ಆ್ಯಂಡ್ ಡಿ ( ಕೃಷಿಗೆ ಯೋಗ್ಯವಲ್ಲದ ಭೂಮಿ ) ವಿಚಾರವಾಗಿ ಜನರು ಇಂದು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

2019ರ ಜೂನ್12ರಂದು ಕೊಟ್ಟ ತೀರ್ಪಿನಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಪರಿಭಾವಿತ ಅರಣ್ಯದ ವಿಚಾರವು ಕೇವಲ ಅಧಿಕಾರಿಗಳ ಕಲ್ಪನೆ. ಅದಕ್ಕೆ ನಿಯಮದ ಬಲವಿಲ್ಲ ಎಂದು ಹೇಳಿ ಸ್ಪಷ್ಟ ತೀರ್ಪು ನೀಡಿದೆ. ಅದರಂತೆ ಕೊಡಗಿನಲ್ಲಿ ಪೈಸಾರಿ ಜಾಗಗಳ ಸಮಗ್ರ ಸರ್ವೇ ನಡೆಸಬೇಕು. ದೊಡ್ಡ ಭೂ ಹಿಡುವಳಿದಾರರಲ್ಲಿ ಹೊಂದಿರಬಹುದಾದ ಭೂಮಿಯನ್ನು ಕಂಡುಹಿಡಿದು ಸರ್ಕಾರದ ವಶಕ್ಕೆ ಪಡೆಯಬೇಕು. ವಶಕ್ಕೆ ಪಡೆದಿರುವ ಭೂಮಿಯನ್ನು ನಿವೃತ್ತ ಸೈನಿಕರಿಗೆ, ಭೂರಹಿತರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಹಂಚುವಂತಾಗಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಘಟಕದ ಸಂಚಾಲಕ ಕೆ.ಎಚ್. ಹನೀಫ್ ಚಾಮಿಯಾಲ, ಉದಯ ಕುಮಾರ್ ನೆಲ್ಯಹುದಿಕೇರಿ, ಹಮೀದ್ ಗುಂಡಿಕೆರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net