ಡೀನ್ ಮಗಳಾದ ಅಮೂಲ್ಯಗೆ 16 ಚಿನ್ನದ ಪದಕ

bccb2055-3c13-4c7e-991d-971de2e7ce5d
Published on

ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮಗಳಾದ ಅಮೂಲ್ಯ ಪಾಟೀಲಗೆ ಬಿ.ಎಸ್.ಸಿ ಪದವಿಯಲ್ಲಿ 16 ಚಿನ್ನದ ಪಕದ ಲಭಿಸಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು.

ಚಿನ್ನದ ಪದಕ ಪಡೆದ ಅಮೂಲ್ಯ ಅವರು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂಗಪ್ಪ ಪಾಟೀಲ ಅವರ ಹಿರಿಯ ಮಗಳಾಗಿದ್ದು, ತಾಯಿ ಬೀದರ ಜಿಲ್ಲೆ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾಗಿದ್ದಾರೆ. ನಿರ್ಮಲಾ ಹುಬ್ಬಳ್ಳಿಯ ಠಕ್ಕರ್ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ, ಪಿಯುಸಿ ತರಗತಿಯನ್ನು ಬೆಂಗಳೂರಿನ ಎಂಇಎಸ್ ಪ್ರೊ.ಸುಬ್ಬರಾವ್ ಪಿಯು ಮಹಾವಿದ್ಯಾಲಯದಲ್ಲಿ ಕಲಿತಿದ್ದು, ಸ್ನಾತಕ ತೋಟಗಾರಿಕೆ ಪದವಿಯನ್ನು ಬೀದರನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ.

ಬಿಎಸ್‍ಸಿ ಪದವಿಯ ವಿವಿಧ ವಿಭಾಗದಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ತಂದೆ-ತಾಯಿಯರ ಪ್ರೋತ್ಸಾಹ, ಓದಿಲ್ಲದೇ ಜೀವನವಿಲ್ಲ. ಓದಿದರೆ ಮಾತ್ರ ಮುಂದೆ ಬರಲು ಸಾಧ್ಯವೆಂಬುದನ್ನು ತಿಳಿದಿರುವುದಾಗಿ ಅಮೂಲ್ಯ ಹೇಳುತ್ತಾರೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಪರಿಶ್ರಮ ಮುಖ್ಯವಾಗಿದೆ. ನನ್ನ ತಂಗಿ ಮತ್ತು ಅಜ್ಜ-ಅಜ್ಜಿಯರು ನನಗೆ ಸ್ಪೂರ್ತಿಯಾಗಿದ್ದರು. ಮುಂದೆ ಎಂ.ಎಸ್.ಸಿಯಲ್ಲಿ ಸ್ನಾತಕೋತ್ತರ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net