

ಬಾಗಲಕೋಟೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತಮ್ಮ ಜನ ಸಂಪರ್ಕ ಕಾರ್ಯಾಲಯದಿಂದ ಆರಂಭಗೊAಡ ಪ್ರತಿಭಟನೆ ಡಾ.ಬಿ.ಆರ್. ಅಂಬೇಡ್ಕರ ಸರ್ಕಲ್ ವರೆಗೆ ಆಗಮಿಸಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿದರು. ನಂತರ ಡಿಕೆಶಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ರಚಿಸಿರುವ ಸಂವಿಧಾನದ ಶೆಡ್ಯೂಲ್‌ನಲ್ಲಿ ಇಲ್ಲದ ಜನರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಡಾ.ಅಂಬೇಡ್ಕರ ಅವರು ರಚಿಸಿದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮೇಲ್ನೋಟಕ್ಕೆ ಶೇ.೪ ಕಾಮಗಾರಿ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಕಾನೂನು ಮಾಡಿರಬಹುದು. ಆದರೇ ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವಂತಹ ಹುನ್ನಾರಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಸಂವಿಧಾನ ವಿರೋಧಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಡಾ.ಶೇಖರ ಮಾನೆ, ವಿರುಪಾಕ್ಷ ಅಮೃತಕರ, ಮಲ್ಲಿಕಾರ್ಜುನ ಸುರಪುರ, ರಾಘು ನಾಗೂರ, ರಾಜು ಗೌಳಿ, ರಾಜು ಲಮಾಣಿ, ಸುಽÃರ ಜಾಧವ, ಶಾಂತಾಬಾಯಿ ಗೋಣಿ, ವಿಜಯಲಕ್ಷಿ÷್ಮ ಅಂಗಡಿ, ಗಂಗಾಬಾಯಿ ರಜಪೂತ, ಯಮನಪ್ಪ ಮಂಡಿಕೇರಿ, ರಾಜು ಚಿತ್ತವಾಡಗಿ, ಕುಮಾರ ಗಿರಿಜಾ, ಮಂಜುನಾಥ ಬಳೂರಗಿ, ರಾಜು ನಾಯಕ ಸೇರಿದಂತೆ ಇತರರು ಇದ್ದರು.