ಡಿಸಿ ಜಾನಕಿ ಭೇಟಿ ಸಮೀಕ್ಷೆ ಕಾರ್ಯ ಪರಿಶೀಲನೆ

bkt-25-1
ಒಳ ಮೀಸಲಾತಿ ಸಮೀಕ್ಷೆ ಕಾರ್ಯ ಹಿನ್ನಲೆಯಲ್ಲಿ ಜಮಖಂಡಿ ತಾಲೂಕಿನ ವಿವಿಧ ಮತಗಟ್ಟೆಗಳ ವ್ಯಾಪ್ತಿಯ ಮನೆಗಳಿಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಪರಿಶೀಲಿಸಿದರು. ಉಪ ವಿಭಾಗಾಽಕಾರಿ ಶ್ವೇತಾ ಬೀಡಿಕರ ವಿವಿಧ ಅಽಕಾರಿಗಳು ಇದ್ದರು.
Published on

ಬಾಗಲಕೋಟೆ: ಜಮಖಂಡಿ ತಾಲೂಕಿನ ವಿವಿಧ ಮತಗಟ್ಟೆಗಳ ವ್ಯಾಪ್ತಿಯ ಮನೆಗಳಿಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಒಳ ಮೀಸಲಾತಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದರು.

ಒಳಮೀಸಲಾತಿ ಜಾರಿಗಾಗಿ ನ್ಯಾ.ಎನ್.ನಾಗಮೋಹನ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೃತೃತ್ವದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಹಿನ್ನಲೆಯಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನ ಮತಗಟ್ಟೆ ಸಂಖ್ಯೆ ೧೭೫, ೧೭೬, ೧೭೭ ಮತ್ತು ೧೯೧ ವ್ಯಾಪ್ತಿಗಳಲ್ಲಿ ಬರುವ ಪರಿಶಿಷ್ಟ ಜಾತಿಯ ಮನೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಜನರ ಒಳಮೀಸಲಾತಿ ಸಮೀಕ್ಷೆ ನಡೆಸಿದ ಬಗ್ಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಳ ಮೀಸಲಾತಿ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಮೇ ೫ ರಿಂದ ಪ್ರಾರಂಭಿಸಲಾಗಿದ್ದು, ಮನೆ ಮನೆ ಭೇಟಿ ನೀಡಿ ನಡೆಸಲಾಗುತ್ತಿರುವ ಸಮೀಕ್ಷೆಯ ಅವಽಯನ್ನು ಮೇ ೨೬ ರಿಂದ ೨೯ ರವರೆಗೆ ಆಯೋಗ ವಿಸ್ತರಣೆ ಮಾಡಿದೆ. ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ೩ ದಿನಗಳ ಕಾಲ ಮೇ ೩೦ ರಿಂದ ಜೂನ್ ೧ ವರೆಗೆ ಮರು ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಜೂ.೧ ವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪರಿಶಿಷ್ಡ ಜಾತಿಯ ಮನೆಗಳು ೮೦೨೩೨, ಸದಸ್ಯರು ೩೧೪೩೬೯ ಮತ್ತು ಇತರೆ ೩೯೦೨೯೭ ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ವೇಳಾ ಪಟ್ಟಿಯಂತೆ ಗಣತಿದಾರರು, ಮೇಲ್ವಿಚಾರಕರು ಗಣತಿ ಕಾರ್ಯವನ್ನು ಮುಂದುವರಿಸಲು ಸೂಚಿಸಲಾಗಿದೆ. ಸಮೀಕ್ಷೆಗೆ ಬೇಕಾದ ಅಗತ್ಯ ಮಾಹಿತಿಯನ್ನು ಒದಗಿಸಿ ಸಮೀಕ್ಷೆದಾರರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದರು.

ಸಮೀಕ್ಷೆಗೆ ಸಂಬ0ಽಸಿದ0ತೆ ಜಿಲ್ಲಾಽಕಾರಿಗಳ ಕಚೇರಿಯಲ್ಲಿ ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ ೦೮೩೫೪-೨೩೫೫೨೬, ೯೪೮೦೮೪೩೦೨೧ಗೆ ಕರೆ ಮಾಡಿ ಮಾಹಿತ ಪಡೆಯುವಂತೆ ಜಿಲ್ಲಾಽಕಾರಿಗಳು ತಿಳಿಸಿದರು. ಭೇಟಿ ಸಮಯದಲ್ಲಿ ಜಮಖಂಡಿ ಉಪ ವಿಭಾಗಾಽಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರೆ ಅಽಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net