

ಬಾಗಲಕೋಟೆ: ಪ್ರಸಕ್ತ ಹಂಗಾಮಿನ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು ಹಾಗೂ ಈ ಹಿಂದಿನ ವರ್ಷಗಳ ಎಲ್ಲ ಬಾಕಿ ಬಿಲ್‌ಗಳನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಇಲ್ಲಿನ ಡಿಸಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ-ಬನ ಹಟ್ಟಿ, ತೇರದಾಳ, ಬೀಳಗಿ, ಹುನಗುಂದ, ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆ ಸೇರಿದಂತೆ ನಾನಾ ಭಾಗದಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳು, ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ ಹಾಕಿ ತಡೆ ಒಡ್ಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಜಾನಕಿ ಕೆ.ಎಂ., ಎಸ್ಪಿ ಅಮರನಾಥ ರೆಡ್ಡಿ ಆಗಮಿಸಿ ಸಮಾಧಾನಪಡಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ, ಜಿ.ಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರು ತೀವ್ರ ಸಂಕಷ್ಟದಲ್ಲಿ ಬದುಕುವಂತಾಗಿದೆ. ಸರ್ಕಾರ ಹಾಗೂ ಸರ್ಕಾರಿ ನೌಕರರು ರೈತರಿಂದ ಅನ್ನಬಟ್ಟಿಲು ತುಂಬುತ್ತಿದೆ ಎನ್ನುವ ಕಲ್ಪನೆ ಇಲ್ಲದೆ ಬದುಕುತ್ತಿದೆ. ರೈತರಿಗೆ ನೋವು ಆದಾಗ ಯಾರೊಬ್ಬರು ಬರುತ್ತಿಲ್ಲ. ವರ್ಷ ಪೂರ್ತಿ ಕಷ್ಟಪಟ್ಟು ದುಡಿದು ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರು ಸಹ ಹಣ ಸಂದಾಯ ಮಾಡುತ್ತಿಲ್ಲ. ಕಳೆದ ನಾಲ್ಕೆÊದು ತಿಂಗಳಿನಿAದ ಚಾತಕ ಪಕ್ಷಿಯಂತೆ ಅನ್ನದಾತರು ಕಾದು ಕುಳಿತಿದ್ದಾರೆ. ಉಪವಾದವಿದ್ದು ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ, ಅಽಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅಽಕಾರದ ಅಮಲಿನಲ್ಲಿ ಇದ್ದಾರೆ. ಕಿಚ್ಚಿಂತ್ತು ಕರುಣೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇವರಿಗೆ ನಿಜವಾಗಿ ಮನುಷ್ಯತ್ವ ಇದ್ದರೇ ಈಗಾಗಲೇ ಸಭೆ ನಡೆಸಿ ಬಿಲ್ ಪಾವತಿಸಲು ಸೂಚನೆ ನೀಡುತ್ತಿದ್ದರು. ಆದರೇ ಹೃದಯವೇ ಇಲ್ಲದಂತೆ ಬದುಕಿದ್ದಾರೆ ಎಂದು ಟೀಕಿಸಿದರು.
ನ್ಯಾಯವಾದಿ ಯಲ್ಲಪ್ಪ ಹೆಗಡೆ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಬಾಗಲಕೋಟೆ ಜಿಲ್ಲೆಯ ೧೩ ಸಕ್ಕರೆ ಕಾರ್ಖಾನೆಗಳು ೧೦೪೦ ಕೋಟಿ ರೂ. ಕಬ್ಬಿನ ಬಾಕಿ ಉಳಿಸಿಕೊಂಡಿವೆ. ಇದು ವರೆಗೂ ಸಕ್ಕರೆ ಕಾರ್ಖಾನೆಗಳ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ. ಸೂಚನೆ ನೀಡುತ್ತಿಲ್ಲ. ಕಬ್ಬು ಕಳುಹಿಸಿ ೪-೫ ತಿಂಗಳಾದರು ಬಿಡಿಗಾಸು ಬಂದಿಲ್ಲ ಎಂದರೇ ಏನರ್ಥ ? ಇದು ಶೋಷಣೆೆ ಅಲ್ವವೇ ?. ಈ ಹಿಂದಿನ ಎಲ್ಲ ಹಂಗಾಮಿನ ಬಾಕಿ ಸೇರಿ ೪ ಸಾವಿರ ಕೋಟಿ ರೂ.ಗಿಂತಲು ಹೆಚ್ಚು ಇದೆ. ಆದರು ಸಹ ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಇದೇ ತಿಂಗಳು ಸಿಎಂ ಸಿದ್ದರಾಮಯ್ಯ ಕೂಡಲ ಸಂಗಮಕ್ಕೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಬಾಕಿ ಬಿಲ್ ಪಾವತಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಈರೆಪ್ಪ ಹಂಚಿನಾಳ, ನಾಗೇಶ ಗೋಲಶೆಟ್ಟಿ, ಬಸವರಾಜ ಧರ್ಮಂತಿ, ಮುತ್ತಪ್ಪ ಹಿರೇಕುಂಬಿ, ತಿಪ್ಪಣ್ಣ ಮೇಟಿ, ರಾಜು ನದಾ-À, ಶ್ರೀಶೈಲ ಭೂಮಾರ, ಗಂಗಾಧರ ಮೇಟಿ, ಶಿವನಗೌಡ ನಾಯಕ, ಸೋಮು ಬಿರಾದಾರ, ಗೋವಿಂದಪ್ಪ ಮೆಟಗುಡ್ಡ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.