

ಅರಕಲಗೂಡು: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕಚೇರಿ ಸಹಾಯಕರಾಗಿದ್ದ ಎಸ್.ಎ.ರಾಜಕುಮಾರ್ (58) ಕರ್ತವ್ಯದಲ್ಲಿದ್ದಾಗಲೇ ಶುಕ್ರವಾರ ಮಧ್ಯಾಹ್ನ ಎದೆನೋವಿನಿಂದ ಮೃತಪಟ್ಟರು.
ಮಧ್ಯಾಹ್ನ 1.35ರ ವೇಳೆಗೆ ಎದೆನೋವು ಕಾಣಿಸಿಕೊಂಡಾಗ ಅವರನ್ನು ಸಿಬ್ಬಂದಿ ತಕ್ಷಣ ಬೈಕ್‌ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯರು ಇಸಿಜಿ ಮಾಡಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ 1.45ಕ್ಕೆ ಕೊನೆಯುಸಿರೆಳೆದರು.
ಇವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಬೆಂಗಳೂರು ಸೆಂಟ್ರಲ್ ಡಿಪೋ ಹಾಗೂ ಚಿಕ್ಕಮಗಳೂರು ಕೆಎಸ್‌ಆರ್ ಟಿಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಅರಕಲಗೂಡು ಡಿಪೋಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಇವರು ಹಾಸನದ ಬಿಟ್ಟಗೌಡನಹಳ್ಳಿ ಬಳಿ ಕೃಷ್ಣಾನಗರ ಗ್ರಾಮದಲ್ಲಿ ನೆಲೆಸಿದ್ದರು.