ಡಿಕೆಶಿ ಹಿಂದುತ್ವ ಭ್ರಮೆ, ನಾಟಕ

IMG_10258_24_11_2021_20__2_1_7HAFKOJ5
Published on

ಬಾಗಲಕೋಟೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಇತ್ತೀಚಿನ ಹಿಂದುತ್ವದ ಬಗೆಗಿನ ನಡೆ ಅವರ ವೈಯಕ್ತಿಕ. ಆದರೆ, ಅವರು ತಕ್ಷಣ ಹಿಂದೂವಾದಿ ಆಗಿದ್ದಾರೆ, ಹಿಂದುತ್ವದ ಕಡೆಗೆ ತಿರುಗಿದ್ದಾರೆ ಎನ್ನುವುದೆಲ್ಲ ಬರೀ ಭ್ರಮೆ ಹಾಗೂ ಅದೊಂದು ನಾಟಕವಷ್ಟೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಗೇಲಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಡಿಕೆಶಿ ಮಧ್ಯ ಭಿನ್ನಾಭಿಪ್ರಾಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಾಕ್‌ಮೇಲ್ ಮಾಡುವ ಕುತಂತ್ರದಿAದ ಹಿಂದುತ್ವದ ವಿಚಾರಧಾರೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಡಿಕೆಶಿ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬಾರದು. ಈ ರೀತಿ ಅಽಕಾರಕ್ಕಾಗಿ ಹಿಂದುತ್ವದ ನಾಟಕ ಮಾಡುವವರು ಬೇಕಾದಷ್ಟು ಜನರು ಇದ್ದಾರೆ. ಇದೀಗ ಡಿಕೆಶಿ ಅವರದ್ದು ಇದೊಂದು ನಾಟಕ. ಅವರಿಗೆ ಹಿಂದುತ್ವದ ಬಗ್ಗೆ ನಿಜವಾದ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಮುಂಬರುವ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್, ಬಜೆಟ್‌ನಲ್ಲಿ ರಾಜ್ಯದ ರೈತರು, ಕಾರ್ಮಿಕರು, ನೀರಾವರಿ, ರಸ್ತೆ ಅಭಿವೃದ್ಧಿ ಎಂದು ಮೂಗಿಗೆ ತುಪ್ಪ ಹಚ್ಚುವ ವ್ಯವಸ್ಥಿತವಾದ ಪ್ರಕ್ರಿಯೆ. ಬಜೆಟ್‌ನಲ್ಲಿ ನೀಡಿದ ಭರವಸೆ ಜಾರಿಗೆ ತರುವ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಗಂಭೀರ ವಿಚಾರ ಮಾಡಬೇಕಿದೆ. ಗ್ಯಾರಂಟಿಗಳು ಎನ್ನುವ ಮೂರ್ಖತನದ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಖೋಟಾ ಆಗಿದೆ. ಇದರಿಂದ ಸರ್ಕಾರದ ಖಜಾನೆ ಖಾಲಿ ಆಗಿದೆ. ಹೀಗಾಗಿ ಬಜೆಟ್ ಜಾರಿಗೆ ತರುವುದು ಹೇಗೆ? ಮೀಸಲು ಇಟ್ಟ ಅನುದಾನವನ್ನು ಅದೇ ಉದ್ದೇಶ ಮತ್ತು ವ್ಯಕ್ತಿಗೆ ತಲುಪುವುದು ಹೇಗೆ ಎಂದು ಯೋಚನೆ ಮಾಡಬೇಕು ಎಂದರು.

ಶಿವಮೊಗ್ಗ ನಗರ ಪ್ರವೇಶಕ್ಕೆ ತಮಗೆ ಅಲ್ಲಿನ ಜಿಲ್ಲಾಡಳಿತ ನಿಷೇಧ ಮಾಡಿದ್ದ ವಿಚಾರಕ್ಕೆ, ಈಗಾಗಲೇ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದು, ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದೆ ಎಂದು ಹೇಳಿದರು.

ಬಿಡುಗಡೆ ಆಗುತ್ತಿರುವ ಪುಸ್ತಕ ಹಿಂದು ಹುಡುಗಿಯರ ರಕ್ಷಣೆಗಾಗಿ ಇರುವುದು. ಲವ್ ಜಿಹಾದ್ ಮತ್ತು ಮತಾಂತರ ವಿರುದ್ಧ ಈ ಪುಸ್ತಕ ಇದೆ. ಒಂದು ಲಕ್ಷ ಮನೆಗಳಿಗೆ ಪುಸ್ತಕ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನು ಮುಂದಾದರೂ ಅಽಕಾರಿಗಳು ವಿಚಾರ ಹೇಳುವಂತದ್ದನ್ನು ತಡೆಯುವ ಕೆಲಸ ಮಾಡಬಾರದು. ಹೇಳುವ ವಿಚಾರದಲ್ಲಿ ಕಾನೂನುಬಾಹಿರ ಇದ್ದರೆ ಕೇಸ್ ಹಾಕಿ, ಜೈಲಿಗೆ ಹಾಕಲಿ. ಆದರೆ, ವಿಚಾರ ಹೇಳುವುದನ್ನೆ ತಡೆಯಲು ಹೋದರೆ ದೊಡ್ಡ ಅನಾಹುತವಾಗುತ್ತದೆ. ಲವ್ ಜಿಹಾದ್ ವಿರುದ್ಧ ೧೦೦ ಕಡೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಔರಂಗಜೇಬ್ ಕುರಿತು ಮಹಾರಾಷ್ಟçದ ಸಮಾಜವಾದಿ, ಶಾಸಕ ಅಬು ಅಜ್ಮಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮುತಾಲಿಕ್, ಅವರ ವಿರುದ್ಧ ಬರೀ ಪ್ರಕರಣ ದಾಖಲಿಸುವದಲ್ಲ, ಕೂಡಲೇ ಅವರನ್ನು ಜೈಲಿಗೂ ಹಾಕಬೇಕು. ಶಿವಾಜಿ ಮಹಾರಾಜರ ಮಗ ಸಂಭಾಜಿಯನ್ನು ಕ್ರೂರವಾಗಿ ಕೊಂದಿರುವುದು ಇತಿಹಾಸದಲ್ಲಿದೆ. ಸಂಭಾಜಿ ಅವರನ್ನು ಹೇಗೆ ಚಿತ್ರಹಿಂಸೆ ಕೊಟ್ಟರೋ ಅದೇ ರೀತಿ ಅಜ್ಮಿಗೂ ಆಗಬೇಕು. ಅವರು ಇತಿಹಾಸ ಓದಿಲ್ಲ. ಬರೀ ಕಾಂಗ್ರೆಸ್, ಕಮ್ಯುನಿಷ್ಟರು ಬರೆದಿರುವ ಇತಿಹಾಸವನ್ನು ಓದುತ್ತಿದ್ದೇವೆ. ಬಾಬರ್, ಹುಮಾಯೂನ್‌ರ ಕಥೆ ಓದಿದ್ದೇವೆ. ಈಗ ಬಂದಿರುವ ಛಾವಾ ಚಿತ್ರವನ್ನು ಪ್ರತಿಯೊಬ್ಬ ಹಿಂದು ನೋಡಬೇಕು. ದೇಶಭಕ್ತಿ, ಧರ್ಮನಿಷ್ಠೆ ಕಲಿಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net