ಡಿ. ೩೦ ರಂದು ಪದವಿ ಪೂರ್ವ ಚಲನ ಚಿತ್ರ ಬಿಡುಗಡೆ

bkt-17-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪದವಿ ಪೂರ್ವ ಚಲನ ಚಿತ್ರದ ನಾಯಕ ಪೃಥ್ವಿ ಶಾಮನೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿತ್ರದ ನಾಯಕಿ ಸುಷ್ಮಿತಾ, ನಟರಾದ ರಜನೀಶ, ವಿಜಯ ಕಿರಣ, ವೆಂಕಟ್, ಬ್ರಿಜೇಶ ಸೇರಿದಂತೆ ಇತರರು ಇದ್ದರು
Published on

ಬಾಗಲಕೋಟೆ: ಮೊಬೈಲ್ ಇಲ್ಲದ ೧೯೯೫-೧೯೯೫ ಕಾಲದಲ್ಲಿ ಕಾಲೇಜುಗಳಲ್ಲಿನ ಸ್ನೇಹ, ಪ್ರೀತಿ, ಸಂಬಂಧಗಳ ಕುರಿತು ವಿಭಿನ್ನ ಕಥೆ ಇರುವ ಪದವಿ ಪೂರ್ವ ಚಲನ ಚಿತ್ರವು ಡಿ.೩೦ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಪೃಥ್ವಿ ಶಾಮನೂರ ಹೇಳಿದರು.
ಹೊಸಬರು ಹಾಗೂ ಹಳಬರ ತಂಡ ಕೂಡಿಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ನಾನೂ ಸೇರಿದಂತೆ ಹಲವರು ಮೊದಲ ಬಾರಿಗೆ ಚಲನಚಿತ್ರದಲ್ಲಿ ನಟಿಸುತ್ತಿದ್ದೇವೆ. ನಮಗೆ ಯೋಗರಾಜ್ ಭಟ್, ಅರ್ಜುನ್ ಜನ್ಯ, ಹಂಸಲೇಖ ಪ್ರೋತ್ಸಾಹ ನೀಡಿದ್ದಾರೆ. ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ೩ ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು, ಮೈಸೂರು, ಶಿವಮೊಗ್ಗ ಭಾಗದಲ್ಲಿ ಚಿತ್ರಿಕರಣ ಮಾಡಲಾಗಿದೆ. ಹಿರಿಯ ನಟ ಜಗ್ಗೇಶ ಅವರು ಟೀಸರ ಬಿಡುಗಡೆ ಮಾಡಿದ್ದಾರೆ. ನಟ ಕಿಚ್ಚ ಸುದೀಪ ಹಾಡು ಬಿಡುಗಡೆ ಮಾಡಿದ್ದಾರೆ. ಆದಿತಿ ಪ್ರಭುದೇವ, ದಿವ್ಯ ಉರುಡುಗ ಸೇರಿದಂತೆ ಹಲವರು ನಟಿಸಿದ್ದಾರೆ. ಯೋಗರಾಜ ಭಟ್ ಹಾಗೂ ರವಿ ಶಾಮನೂರ ನಿರ್ಮಾಪಕರು, ಹರಿಪ್ರಸಾದ ಜಯಣ್ಣ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಎಂದರು.
ನಾಯಕಿ ಸುಷ್ಮಿತಾ ಮಾತನಾಡಿ, ಪ್ರತಿಯೊಬ್ಬರ ಕಾಲೇಜಿನ ದಿನಗಳನ್ನು ಚಲನಚಿತ್ರವು ನೆನಪಿಸಲಿದೆ. ಇದೊಂದು ಉತ್ತಮ ಚಿತ್ರವಾಗಿದ್ದು, ಎಲ್ಲರೂ ಚಿತ್ರ ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನಟರಾದ ರಜನೀಶ, ವಿಜಯ ಕಿರಣ, ವೆಂಕಟ್, ಬ್ರಿಜೇಶ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net