ಡಾ.ಶಾಂತಿನಾಥ, ಶಂಕರಯ್ಯಗೆ ರನ್ನ ಹಳಗನ್ನಡ ಪ್ರಶಸ್ತಿ

b5cd64a2-7fe6-4f49-98f1-f8c1d7a74c7e
ಡಾ.ಶಾಂತಿನಾಥ ದಿಬ್ಬದ, ಶಂಕರಯ್ಯ ಉಕ್ಕಲಿ
Published on

ಬಾಗಲಕೋಟೆ: ಹಳಗನ್ನಡ ಸಾಹಿತ್ಯ, ಶಾಸನ ಹಾಗೂ ಹಸ್ತಪ್ರತಿ ಮತ್ತಿತರ ಕನ್ನಡ ಪ್ರಾಚೀನ ಸಾಹಿತ್ಯ ಅಧ್ಯಯನ, ಸಂಶೋಧನೆ ಮಾಡಿದ ಕನ್ನಡ ವಿದ್ವಾಂಸರನ್ನು ಗುರುತಿಸಿ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನದಿಂದ ಕೊಡಲ್ಪಡುವ ಹಳಗನ್ನಡ ಪ್ರಶಸ್ತಿಗೆ ವಿಶ್ರಾಂತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಹಾಗೂ ವಿಶ್ರಾಂತ ಶಿಕ್ಷಕ ಶಂಕರಯ್ಯ ಉಕ್ಕಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯೂ ತಲಾ ಒಂದು ಲಕ್ಷ ರೂ. ನಗದು ಹಾಗೂ ಗೌರವ ಸನ್ಮಾನವನ್ನು ಒಳಗೊಂಡಿದ್ದು, ಫೆ. ೨೪ ರಂದು ಮುಧೋಳದ ರನ್ನ ಕ್ರೀಡಾಂಗಣದಲ್ಲಿ ನಡೆಯುವ ರನ್ನ ವೈಭವ ಉತ್ಸವ ೨೦೨೫ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.

ಫೆ.. ೨೨ ರನ್ನಬೆಳಗಲಿ ಹಾಗೂ -ಫೆ. ೨೩, ೨೪ ರಂದು ಮುಧೋಳದಲ್ಲಿ ನಡೆಯುವ ಮೂರು ದಿನಗಳ ರನ್ನ ವೈಭವ ಉತ್ಸವ ಕಾರ್ಯಕ್ರಮದ ಕುರಿತು ಅಂತಿಮ ಸಿದ್ದತೆ ಬಗ್ಗೆ ಶುಕ್ರವಾರ ಮುಧೋಳ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರು ತಿಳಿಸಿದರು.

ಡಾ.ಶಾಂತಿನಾಥ ದಿಬ್ಬದ ಬೆಳಗಾವಿ ಜಿಲ್ಲೆಯ ಬೈಲಹೊಂಗ ತಾಲೂಕಿನ ಸೋಮಪುರ ಗ್ರಾಮದವರು. ರಾಣಿ ಚನ್ನಮ್ಮ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಬಳಿಕ ಕುಲಸಚಿವರಾಗಿ ಸೇವೆ ಸಲ್ಲಿಸಿ ನಿವೃತ್ತಿ ಅಗಿದ್ದಾರೆ. ಮಹಾಕವಿ ಪಂಪ ಮತ್ತು ಅವನ ಕೃತಿಗಳು, ಪಂಪ ಭಾರತ ಸಾಂಸ್ಕೃತಿಕ ಅಧ್ಯಯನ, ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ-ಜನಪರ, ಜೈನ ಸಂಸ್ಕೃತಿ ಸಮೀಕ್ಷೆ(ಸಂಪಾದಕ ಕೃತಿ)ಸೇರಿದಂತೆ ವೈಚಾರಿಕ ಲೇಖನಗಳು, ವೈಜ್ಞಾನಿಕ ಪ್ರಬಂಧಗಳು, ೧೧ ಇದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಹಾಗೂ ೧೫ ವಿದ್ಯಾರ್ಥಿಗಳಿಗೆ ಎಂಪಿಎಲ್ ಮಾರ್ಗದರ್ಶನ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ.

ವಿಜಯಪುರದ ನಿವೃತ್ತ ಶಿಕ್ಷಕರಾಗಿರುವ ಶಂಕರಯ್ಯ ಉಕ್ಕಲಿ ಅವರು ಅನೇಕ ಹಳಗನ್ನಡ ಗ್ರಂಥಗಳ ಕಾವ್ಯಾನುವಾದಗಳನ್ನು ಮಾಡಿದ್ದಾರೆ. ಸೂರ್ಯಪುತ್ರ, ರನ್ನಮಯ, ಪಂಪಭಾರತ, ಆದಿಪುರಾಣಂ ಎಂಬ ಹಳಗನ್ನಡ ಕೃತಿಗಳನ್ನು ಹೊರತಂದಿದ್ದಾರೆ. ಕರ್ಣಪರ‍್ಯ ವಿರಚಿತ ನೇಮಿನಾಥ ಪುರಾಣಂ ಕಾವ್ಯಾನುವಾದ ಹಾಗೂ ರನ್ನ ಅಜಿತನಾಥ ಪುರಾಣ, ಚಾಮರಸನ ಪ್ರಭುಲಿಂಗ ಲೀಲೆ ಕಾವ್ಯ ಸಂಕಲನಗಳು ಪ್ರಕಟನೆಗೆ ಸಿದ್ದಗೊಂಡಿವೆ. ವಿವಿಧ ಸಂಘ-ಸAಸ್ಥೆಗಳಿAದ ಇವರಿಗೆ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net