ಡಾ. ಕೋರೆ ಜನ್ಮದಿನ ನಿಮಿತ್ತ ಗೋ ಶಾಲೆಗೆ 4 ಟನ್ ಮೇವು

0102
Published on


ನಿಪ್ಪಾಣಿ: ಡಾ. ಪ್ರಭಾಕರ ಕೋರೆ ಅವರು ತಮ್ಮ 77ನೇ ಜನ್ಮದಿನ ಪ್ರಯುಕ್ತ ಸ್ಥಳೀಯ ಶ್ರೀ ವಿರೂಪಾಕ್ಷಲಿಂಗ ಸಮಾಧಿಮಠದ ಗೋಶಾಲೆಗೆ 4 ಟನ್ ಹಸಿ ಮೇವು ನೀಡಿದರು.

ಮಠದ ಪರವಾಗಿ ಸ್ವೀಕರಿಸಿದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿ, ಮಠದ ಹಿತಚಿಂತಕರಾಗಿರುವ ಡಾ. ಕೋರೆ ಅವರಿಗೆ ವಿರೂಪಾಕ್ಷಲಿಂಗ ದೇವರು ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.

ವಿರೂಪಾಕ್ಷಲಿಂಗ ಸಮಾಧಿಮಠದ ಅಧ್ಯಕ್ಷ ಸುರೇಶ ಶೆಟ್ಟಿ, ಕಾರ್ಯದರ್ಶಿ ರಾಜೇಂದ್ರ ವಾಳವೆ, ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ಚಂದ್ರಕಾಂತ ತಾರಳೆ, ಕೆಎಲ್‌ಇ ನಿರ್ದೇಶಕ ಅಮರ ಬಾಗೇವಾಡಿ, ಶ್ರೀ ಮಹಾತ್ಮ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥಾಪಕ ಅಧ್ಯಕ್ಷ ಡಾ. ಚಂದ್ರಕಾಂತ ಕುರಬೆಟ್ಟಿ, ಸಂಚಾಲಕ ಡಾ. ಶಂಕರಗೌಡ ಪಾಟೀಲ, ರಾಜೇಂದ್ರ ಪಾಟೀಲ, ದಯಾನಂದ ಶಿಪ್ಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net