

ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟದಲ್ಲಿ ಮೇ ೧೩ರಂದು ಡಾ.ಬಿ.ಆರ್.ಅಂಬೇಡ್ಕರ್ ಪಂಚಲೋಹದ ಪ್ರತಿಮೆ ಅನಾವರಣ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಮಾಣಿಕರಾವ್ ಗುಲಗುಂಜಿ ಹೇಳಿದರು. ಮಧ್ಯಾಹ್ನ ೨ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ೫ಕ್ಕೆ ರಥ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಶ್ರೀ ಾನಪ್ರಕಾಶ ಸ್ವಾಮೀಜಿ, ಭಂತೆ ಾನಸಾಗರ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ‍್ಖಗೆ ಉದ್ಘಾಟಿಸಲಿದ್ದು, ಸಚಿವ ಡಾ.ಶರಣಪ್ರಕಾಶ ಪಾಟೀಲ್ ಬಸವೇಶ್ವರ ಮರ‍್ತಿಗೆ ಪೂಜೆ ನೆರವೇರಿಸಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಡಮನಿ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ್ ಜ್ಯೋತಿ ಬೆಳಗಿಸುವರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಜಿಪಂ ಮಾಜಿ ಸದಸ್ಯ ಸುಭಾಷ ರಾಠೋಡ್ ನೀಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಹೇಶ ಗುಲಗುಂಜಿ, ಮಲ್ಲಿಕರ‍್ಜುನ ಗುಲಗುಂಜಿ, ರುದ್ರಮುನಿ ರಾಮತರ‍್ಥಕರ್ ಇತರರಿದ್ದರು.