

ತಿ.ನರಸೀಪುರ: ತಾಲೂಕು ಟೈಲರ್ ಸಂಘದ ಅಧ್ಯಕ್ಷರಾಗಿ ಮಹೇಶ್ ಅವಿರೋಧ ಆಯ್ಕೆಯಾದರು.
ಪಟ್ಟಣದಲ್ಲಿ ಬುಧವಾರ ನಡೆದ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಳಿದಂತೆ ಗೌರವಾಧ್ಯಕ್ಷರಾಗಿ ಮಹದೇವರಾಜು, ಕಾರ್ಯದರ್ಶಿ ರವಿ, ಖಜಾಂಚಿ ಯಶಸ್ವಿನಿ ನಾಗರಾಜ್, ಉಪಾಧ್ಯಕ್ಷ ಮಹದೇವ ಸ್ವಾಮಿ, ಎಂ.ಎಲ್.ಮಹದೇವ, ಸಂಘದ ನಿರ್ದೇಶಕರಾಗಿ ವೆಂಕಟೇಶ್, ಸುರೇಸ್, ಹರೀಶ್, ಗುರುರಾಜ್, ನಾಗರಾಜು, ವಸಂತಾ, ಎಂ.ನಾಗರಾಜು, ಸೋಮಣ್ಣ, ನಸೀರ್ ಅಹಮದ್, ರಂಗಸ್ವಾಮಿ, ಬಸವರಾಜು ಆಯ್ಕೆಯಾದರು.
ಇದೇ ವೇಳೆ ನಿರ್ಗಮಿತ ಅಧ್ಯಕ್ಷ ಮಹದೇವಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರು ಹಾಜರಿದ್ದರು.