ಟಿಎಪಿಸಿಎಂಎಸ್ ಚುನಾವಣೆ ಪ್ರಚಾರಕ್ಕೆ ಚಾಲನೆ

14 CRP-1A
Published on

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಅ.19ರಂದು ನಡೆಯುವ ಟಿಎಪಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಬಹುಮತಗಳೊಂದಿಗೆ ಜಯ ಗಳಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ವಿಶ್ವಾಸವ್ಯಕ್ತಪಡಿಸಿದರು.

ಸೋಮವಾರ ಜೆಡಿಎಸ್ ಬೆಂಬಲಿತ 7 ಮಂದಿ ಅಭ್ಯರ್ಥಿಗಳ ಪರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಅನೇಕ ಅವಧಿಗಳಿಂದ ಟಿಎಪಿಎಂಎಸ್ ಆಡಳಿತ ಮಂಡಳಿಯ ಅಧಿಕಾರವನ್ನು ಜೆಡಿಎಸ್ ನಡೆಸುತ್ತಾ ಬಂದಿದೆ. ಹಿಂದೆ ನಷ್ಟದಲ್ಲಿದ್ದ ಟಿಎಪಿಎಂಎಸ್ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ, ಸದಸ್ಯರು, ಷೇರುದಾರ ಸಹಕಾರದಿಂದ ಪ್ರಸ್ತುತ ಲಾಭದಲ್ಲಿದೆ. ಮುಂಬರುವ ದಿನಗಳಲ್ಲಿ ಉತ್ತಮ ಆಡಳಿತ ದೃಷ್ಟಿಯಿಂದ ಸಂಘದ ಸದಸ್ಯರು ಕಣದಲ್ಲಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.

ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಹಾಲಿ ಅಭ್ಯರ್ಥಿ ಮರಗೂರು ಅನಿಲ್ ಕುಮಾರ್ ಮಾತನಾಡಿ, ಈಗಾಗಲೇ ಒಟ್ಟು 14 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಟಿಎಪಿಎಂಎಸ್ ಮಾಜಿ ಅಧ್ಯಕ್ಷ ಹಾಲಿ ಜೆಡಿಎಸ್ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್, ನೂತನ ನಿರ್ದೇಶಕ ತೋಟಿ ನಾಗರಾಜ್, ಅಭ್ಯರ್ಥಿಗಳಾದ ಎಂ.ಆರ್.ಅನಿಲ್‌ಕುಮಾರ್, ನಂಜುಂಡೇಗೌಡ, ಮಮತಾ ಜಯಣ್ಣ, ಎಂ.ತಾರಾಮಣಿ, ಸಿ.ಎನ್.ಆನಂದ್, ಜಗದೀಶ್, ಕುಂಬಾರಹಳ್ಳಿ ಕೆ.ಆರ್.ರವಿಕುಮಾರ್ ಉಳಿದ 7 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದ್ದಾರೆ. ನೂತನ ನಿರ್ದೇಶಕರಾದ ವೆಂಕಟೇಶ್, ಬೋರೇಗೌಡ, ಕೃಷ್ಣೇಗೌಡ, ನಾಗರಾಜ್ ನೆಟ್ಟೆಕೆರೆ, ಉಮೇಶ್, ಮುಖಂಡರಾದ ಜಯಣ್ಣ, ತರಬೇನಹಳ್ಳಿ ನಂಜುಂಡೇಗೌಡ, ವಾಸು, ಕುಳೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net