ಟಾಟಾ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ

Oplus_131072
Oplus_131072
Published on

ವಿರಾಜಪೇಟೆ: ಟಾಟಾ ಸಂಸ್ಥೆ ವತಿಯಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಸ್ತೆ ಬದಿ ಗಿಡಗಂಟಿಗಳನ್ನು ಕಡಿದು ಶುಕ್ರವಾರ ಸ್ವಚ್ಛಗೊಳಿಸಲಾಯಿತು.

ಸಿಬ್ಬಂದಿ ಹಾಗೂ ನೌಕರರು ಪಾಲ್ಗೊಂಡು ಸ್ವಚ್ಛತಾ ಕಾರ್ಯ ನಡೆಸಿದರು. ಟಾಟಾ ಸಂಸ್ಥೆಯ ವ್ಯವಸ್ಥಾಪಕ ವಿನಯ್ ಮಾತನಾಡಿ, ಟಾಟಾ ಸಂಸ್ಥೆ ವತಿಯಿಂದ ವರ್ಷಕ್ಕೆ ಎರಡು ಬಾರಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದೇವೆ. ನಗರದ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ಗ್ರಾಮ ಪಂಚಾಯಿತಿಗೆ ನೀಡಿ ಇಲ್ಲಿನ ಪರಿಸರವನ್ನು ಸ್ವಚ್ಛವಾಗಿಡಲು ಸಹಕರಿಸುತ್ತೇವೆ. ನಗರವನ್ನು ಸ್ವಚ್ಛವಾಗಿಡುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ ಮಾತನಾಡಿ, ಟಾಟಾ ಸಂಸ್ಥೆ ಮುಂದೆ ಬಂದು ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದೆ. ಟಾಟಾ ಸಂಸ್ಥೆಯ ಈ ರೀತಿಯ ನೆರವನ್ನು ಕಣ್ಣಂಗಾಲ ಪಂಚಾಯಿತಿ ಸದಾ ಬಯಸುತ್ತದೆ ಎಂದರು.

ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗ್ರೀಷ್ಮಾ ಮಾತನಾಡಿ, ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ನಮಗೆ ಎಲ್ಲ ರೀತಿಯ ಸಹಕಾರವನ್ನು ಟಾಟಾ ಸಂಸ್ಥೆ ನೀಡಿದೆ. ಇದೇ ರೀತಿ ಅವರ ಸಹಕಾರ ಇನ್ನು ಮುಂದೆ ಸಿಗುವಂತಾಗಲಿ ಎಂದರು.

ಉಪಾಧ್ಯಕ್ಷ ರಜನಿ ಕುಟ್ಟಪ್ಪ, ಸದಸ್ಯರಾದ ಜೀವನ್, ಕುಮಾರ್, ಕಲ್ಪೇಶ್, ಶಾಂತಿ, ವಿಟಿ ಕಿರಣ್, ಅಜಿತ್ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net