

ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥದ ಬದಿಯಲ್ಲಿ ಲಾರಿ ನಿಲ್ಲಿಸಿ ಟಯರ್ ಬದಲಿಸುತ್ತಿದ್ದ ವ್ಯಕ್ತಿ ಇನ್ನೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲೂಕಿನ ದುಂಡಕುಳಿಯಲ್ಲಿ ಭೀಕರ ಘಟನೆ ನಡೆದಿದಿದ್ದು, ಚಾಲಕನ ದೇಹ ಛಿದ್ರಛಿದ್ರವಾಗಿದೆ. ಮೃತನನ್ನು ಉತ್ತರಪ್ರದೇಶ ಮೂಲದ ಮೊಹಲ್ಲಾ ನಿವಾಸಿ ಶಕೀಲ ಅಹಮ್ಮದ್ (42) ಎಂದು ಗುರುತಿಸಲಾಗಿದೆ. ಇವರು ತನ್ನ ಲಾರಿಯನ್ನು ಚತುಷ್ಪಥದ ಪಕ್ಕದಲ್ಲಿ ನಿಲ್ಲಿಸಿ, ಟಯರ್ ಬದಲಾಯಿಸುತ್ತಿರುವ ಸಂದರ್ಭದಲ್ಲಿ ಅಂಕೋಲಾದಿಂದ ಕುಮಟಾ ಕಡೆ ಬರುತ್ತಿದ್ದ ಇನ್ನೊಂದು ಲಾರಿಯು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಟೈಯರ್ ಮೈಮೇಲೆ ಹರಿದು ಶಕೀಲ್ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕ ಪವನ ಸಿಂಗ್ ಮತ್ತು ಕ್ಲಿನರ್‌ಗೂ ಚಿಕ್ಕಪುಟ್ಟ ಗಾಯಗಳಾಗಿದ್ದು ತಾಲೂಕಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.