ಟಕ್ಕಳಗಿ ಚೆಕ್‌ಪೋಸ್ಟನಲ್ಲಿ ೩.೯೨ ಲಕ್ಷ ರೂ. ನಗದು ವಶ

bkt-13-1
ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಟಕ್ಕಳಕಿ ಚೆಕ್‌ಪೋಸ್ಟನಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳ ತಂಡ.
Published on

ಬಾಗಲಕೋಟೆ: ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಟಕ್ಕಳಕಿ ಚೆಕ್‌ಪೋಸ್ಟನಲ್ಲಿ ೩,೯೨,೫೦೦ ರೂ.ಗಳ ಮೊತ್ತದ ಶೀಲವುಳ್ಳ ಹಣದ ಪೆಟ್ಟಿಯನ್ನು ಎಸ್.ಎಸ್.ಟಿ ತಂಡ ಬುಧವಾರ ವಶಪಡಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.

ಚೆಕ್‌ಪೋಸ್ಟನಲ್ಲಿ ತಪಾಸಣೆ ವೇಳೆಯಲ್ಲಿ ಎಸ್‌ಎಸ್‌ಟಿ ತಂಡದ ಅಧಿಕಾರಿ ವಿ.ಎಸ್.ಕಟ್ಟಿಮನಿ ಮತ್ತು ಕೆಲೂರ ಅವರು ತಪಾಸಣೆ ವೇಳೆಯಲ್ಲಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಬುಧವಾರ ೭೦೬೮ ರೂ.ಗಳ ಮೊತ್ತದ ೧೧.೭೮ ಲೀಟರ್ ಲಿಕ್ಕರ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net