ಜ್ಞಾನದಿಂದ ಅಂಧಕಾರ ನಾಶ

21sdp2
Published on

ಸಿದ್ದಾಪುರ: ಜ್ಞಾನ ನಮ್ಮಲ್ಲಿರುವ ಅಂಧಃಕಾರದ ಅಸ್ತಿತ್ವ ನಾಶಮಾಡುತ್ತದೆ. ದೈವಶಕ್ತಿ ಮೌಲ್ಯಯುಕ್ತ ಜೀವನಕ್ಕೆ ಕಾರಣವಾಗುತ್ತದೆ ಎಂದು ಸಾಗರದ ನಿವೃತ್ತ ಪ್ರಾಂಶುಪಾಲ ವೇ. ಪಂಚಾಕ್ಷರಯ್ಯ ಹಿರೇಮಠ ಹೇಳಿದರು.

ತಾಲೂಕಿನ ಆಲಳ್ಳಿಮಠದಲ್ಲಿ ಯಜುರ್ವೆದ ವೈದಿಕವೃಂದದ ಮುಖ್ಯಸ್ಥ ವೇ. ಪುಟ್ಟಯ್ಯ ಶಾಸ್ತ್ರೀಗಳು ಆಲಳ್ಳಿಮಠ ಆಯೋಜಿಸಿದ್ದ ವೇದ ವಿದ್ಯಾ ಟ್ರಸ್ಟ್ (ರಿ.) ಸಂಸ್ಥೆ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.

ಸ್ವಾವಲಂಬಿ ಬದುಕು ಸೋಮಾರಿತನ ಹಾಗೂ ಸಂಕಷ್ಟ ಸ್ಥಿತಿಯನ್ನು ವಿರೋಧಿಸುತ್ತದೆ. ನಾವು ಶಾಶ್ವತ ಎಂಬ ತಪ್ಪು ಪರಿಕಲ್ಪನೆ ಹೊಂದಿರುವುದರಿಂದ ದುರಾಸೆ ಎಂಬ ಕಾಯಿಲೆಗೆ ಒಳಗಾಗಿದ್ದೇವೆ. ನಮ್ಮ ಶ್ರೇಷ್ಠ ಬದುಕು ನಮ್ಮ ಶ್ರಮದ ಪ್ರತಿಫಲವಾಗಬೇಕು. ಆದರೆ ಅದು ಇತರರ ಸಂಕಷ್ಠಕ್ಕೆ ಜನನತಳಹದಿ ಆಗಬಾರದು ಎಂದರು.

ಜ್ಞಾನ ಹಾಗೂ ಪರಿಪೂರ್ಣ ಮನಸ್ಸಿಗೆ ದುರ್ಗಾ ಪೂಜೆ ಅತ್ಯವಶ್ಯಕ. ದುರ್ಗೆಯನ್ನು ಹಲವು ಹೆಸರಿನಿಂದ ಕರೆಯಲಾಗುತ್ತಿದೆ. ದುರ್ಗೆಯನ್ನು ಪೂಜಿಸಿ ಹಾಗೂ ಆರಾಧಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜ್ಞಾನ ಸಂಸ್ಕಾರ ಹಾಗೂ ಧರ್ಮ ಸಂಸ್ಕಾರದ ಜತೆಗೆ ಕುಟುಂಬ ಹಾಗೂ ಸಮಾಜದ ಸಮತೋಲನ ಸೃಷ್ಠಿಸಿಕೊಂಡು ಸಾರ್ಥಕ ಬದುಕನ್ನು ಹೊಂದುವುದು ಮುಖ್ಯ ಎಂದು ಹೇಳಿದರು.

ಆಲಳ್ಳಿಮಠದ ವೇದ ವಿದ್ಯಾ ಟ್ರಸ್ಟ್​ನ ಗೌರವಾಧ್ಯಕ್ಷ ವೇ.ಮಲ್ಲಿಕಾರ್ಜುನಯ್ಯ ಆಲಳ್ಳಿಮಠ ಅಧ್ಯಕ್ಷತೆವಹಿಸಿದ್ದರು. ಸಿದ್ದಾಪುರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇ.ಪರಮೇಶ್ವರಯ್ಯ ಕಾನಳ್ಳಿಮಠ, ಮಹೇಂದ್ರ ಗೌಡರ್ ಹುಕ್ಕಳಿ, ರಾಜು ಗೌಡ ಹೊಸಬಾಳೆ, ಕೀರ್ತಿ ಗೌಡ ಕಾನಳ್ಳಿ ಉಪಸ್ಥಿತರಿದ್ದರು. ಬಿ.ಎಂ. ಜಗದೀಶ್ವರಯ್ಯ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net