ಜ್ಞಾನದ ಬೆಳಕು ನೀಡಿದ ಚುಟುಕು ಬ್ರಹ್ಮ

11KWR2
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದರ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದವರು ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಎಂದು ಬಿಜಿವಿಎಸ್ ಕಾಲೇಜ್​ನ ನಿವೃತ್ತ ಕನ್ನಡ ಉಪನ್ಯಾಸಕ ಶ್ರೀಧರ ನಾಯಕ ಹೇಳಿದರು.

ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕೆನರಾ ವೆಲ್ಪೇರ್ ಟ್ರಸ್ಟ್ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಹಾಲಕ್ಕಿ, ಕುಣಬಿ, ಗೌಳಿ ಹೀಗೆ ಜಿಲ್ಲೆಯ ಅತಿ ಹಿಂದುಳಿದ ಸಮುದಾಯಗಳ ಪರವಾಗಿ ಹೋರಾಟ ಮಾಡಿದರು. ಸಣ್ಣದಾದ ಅರ್ಥಗರ್ಭಿತ ಚುಕುಟುಗಳನ್ನು ರಚಿಸುವ ಮೂಲಕ ಜನರಿಗೆ ಸಾಹಿತ್ಯದ ಅಭಿರುಚಿ ಉಣಬಡಿಸಿದರು ಎಂದು ದಿನಕರ ದೇಸಾಯಿ ಅವರ ಬಗ್ಗೆ ವಿವರಿಸಿದರು. ಕಾರವಾರ, ಶಿರಸಿ ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಬಾಲಚಂದ್ರ ಕುವಾಳೆಕರ್, ಕೆನರಾ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ಎಸ್​ಪಿ ಕಾಮತ್ ಮಾತನಾಡಿದರು. ಕಾಲೇಜ್​ನ ಪ್ರಾಚಾರ್ಯ ಕೇಶವ ಕೆ.ಜಿ. ಸ್ವಾಗತಿಸಿದರು. ವಂದನಾ, ಐಶ್ವರ್ಯ ಅಮದಳ್ಳಿ, ಹರಿಶ್ಚಂದ್ರ ಮರಾಠಿ, ಸೃಜನ್, ಅನನ್ಯ ದಿನಕರರ ಚೌಪದಿಗಳನ್ನು ವಾಚನ ಮಾಡಿದರು. ಪದವಿಪೂರ್ವ ಕಾಲೇಜ್​ನ ಪ್ರಾಂಶುಪಾಲ ಲಲಿತಾ ಶೆಟ್ಟಿ ವಂದಿಸಿದರು. ರಾಜೇಶ್ ಮರಾಠಿ ನಿರೂಪಿಸಿದರು. ಅಮಿಷಾ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net