

ಬಾಗಲಕೋಟೆ: ಮುಂದಿನ ೫ ವರ್ಷದಲ್ಲಿ ಭಾರತದಲ್ಲಿ ಮಹತ್ತರ ಬದಲಾವಣೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಸಜ್ಜುಗೊಳ್ಳಬೇಕು. ಸ್ಮೈಲ್ ಟೀಚರ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಬಿವಿವಿ ಸಂಘ, ವಿಸ್ತಾರ ಜಿಂದಗಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ಮೈಲ್ ಟೀಚರ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಪುನಶ್ಚೇತನಕ್ಕಾಗಿ ನಿರಂತರ ತರಬೇತಿ ಹಮ್ಮಿಕೊಂಡಿದೆ. ಬಿವಿವಿ ಸಂಘದ ವಿನೂತನ ಕಾರ್ಯಗಾರವಾಗಿದೆ. ವಿದ್ಯಾರ್ಥಿಗಳ ಉಜ್ವಲ್ ಭವಿಷ್ಯದ ಯೋಜನೆಗಳನ್ನು ರೂಪಿಸಿಲಾಗಿದೆ ಎಂದರು.
ಬದಲಾವಣೆಗಾಗಿ ಶಿಕ್ಷಕರಿಗೆ ತರಬೇತಿ ಅತಿಮುಖ್ಯವಾಗಿದ್ದು, ದಿನ ನಿತ್ಯ ಅಧ್ಯಯನ ಜೊತಗೆ ಮಕ್ಕಳಿಗೆ ಪಾಠ ಮಾಡುವದರಿಂದ ಮಕ್ಕಳಿಗೆ ಅನುಕೂಲ ಜೊತೆಗೆ ಶಿಕ್ಷಕರಿಗೆ ಜ್ಞಾನ ವೃದ್ಧಿ ಆಗುತ್ತದೆ. ಶಿಕ್ಷಕರು ಪರಿಶುದ್ಧವಾಗಿ ಜೀವನ ನಡೆಸುವುದರ ಜೊತೆಗೆ ತಮ್ಮಲ್ಲಿ ಅದ್ಭುತ ಜ್ಞಾನದಿಂದ ಕೆಲಸ ಮಾಡಬೇಕು, ತಮ್ಮೊಳಗೆ ತಾವು ಸಂಶೋಧನಾತ್ಮಕ ವಿಷಯಗಳಿಂದ ಜ್ಞಾನದ ಪುನರಾರ್ವತೆಯನ್ನು ಮಾಡಿಕೊಳ್ಳಬೇಕು. ಎಐ ತಂತ್ರಜ್ಞಾನ ಈ ಕಾಲಘಟ್ಟದಲ್ಲಿ ಮುಂದಿನ ೫ ವರ್ಷ ಭಾರತ ಮತ್ತಷ್ಟು ಬದಲಾವಣೆಗೊಳ್ಳಲಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಿಕ್ಷಕರಿಗೆ ನೀಡುವ ಈ ತರಬೇತಿ ಕಾರ್ಯಾಗಾರ ಅನಕೂಲಕರವಾಗಲಿದೆ ಎಂದು ತಿಳಿಸಿದರು.
ವಿಸ್ತಾರ ಜಿಂದಗಿ ಸಂಸ್ಥಾಪಕ ಮಹೇಶ ಮಾಶ್ಯಾಳ ಮಾತನಾಡಿ, ಶಿಕ್ಷಕರ ನಿರಂತರ ಅಧ್ಯಯನ ಕ್ರಿಯಾಶೀಲತೆಗಾಗಿ ೯ ತಿಂಗಳ ಆನ್‌ಲೈನ್ ಮತ್ತು ಆಪ್‌ಲೈನ ಕಾರ್ಯಾಗಾರ, ಅನೇಕ ವಿಷಯಗಳ ಮಂಡನೆಗಳು ಸ್ಪರ್ಧೆಗಳಿರುತ್ತವೆ. ಉತ್ತಮ ಶಿಕ್ಷಕರಿಗೆ ಸರ್ಟಿಪಿಕೆಟ್ ಕೊಡಲಾಗುವುದು, ಶಿಕ್ಷಕರು ಪ್ರತಿದಿನ ೧೫ ನಿಮಿಷ ಅಧ್ಯಯನದಲ್ಲಿ ತೊಡಗಬೇಕು, ಒಂದು ವರ್ಷದೊಳಗೆ ಬದಲಾವಣೆ ಕಾಣಬೇಕು ಎಂದರು.
ಶಿಕ್ಷಕರ ಮುಖದಲ್ಲಿ ನಗು ಖಂಡರೆ ಮಗುವಿನ ನನಸ್ಸು ಅರಳುತ್ತದೆ. ಶಿಕ್ಷಣ ರಂಗದಲ್ಲಿ ಶಿಕ್ಷಕರು ಆಧುನಿಕತೆಯ ತಕ್ಕ ಹಾಗೆ ಬದಲಾವಣೆಗೊಂಡು ನಿರಂತರ ಸಂಶೋಧನಾ ಅಧ್ಯಯನದಿಂದ ಗಟ್ಟಿಯಾದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾಗಿದೆ. ಶಿಕ್ಷಕರಿಗಾಗಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಮುಂದಿನ ೩೦-೪೦ ವರ್ಷಗಳ ಮುಂದಿನ ಪಿಳಿಗೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರಿಗಾಗಿ ಇಂಥ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪ್ರಾಚಾರ್ಯ ಕೆ.ಎಚ್.ಹೊಸುರ ಮಾತನಾಡಿದರು. ಪ್ರಾಥಮಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಡಾ.ಮಾಧವ ಭಟ್, ಡಾ.ಪಂಪಾಪತಿ, ಡಾ.ಗುರುರಾಜ ಪಾಟೀಲ, ಸುರೇಶ ಕುಲಕರ್ಣಿ, ಡಾ.ದೀಪಾ ಗರಗ ಇದ್ದರು.