ಜೋಳ, ಭತ್ತ ಖರೀದಿ ಕೇಂದ್ರ ಸ್ಥಾಪನೆ

Fouzia Tarranum new
Published on

ಕಲಬುರಗಿ: ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಮತ್ತು ಭತ್ತ ಖರೀದಿಸಲು ಜಿಲ್ಲಾ ಟಾಸ್ಕ್​ಫರ‍್ಸ್​ ಸಮಿತಿ ತರ‍್ಮಾನದಂತೆ ೭ ಜೋಳ ಮತ್ತು ೮ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರು ನೋಂದಣಿ ಮಾಡಿಕೊಂಡು ಫಸಲು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ತಿಳಿಸಿದ್ದಾರೆ. ಜಿಲ್ಲೆಯ ರೈತರಿಂದ ಜೋಳ ಮತ್ತು ಭತ್ತ ನೋಂದಣಿ ಮತ್ತು ಖರೀದಿಗೆ ಸಂಗ್ರಹಣಾ ಏಜೆನ್ಸಿಯನ್ನಾಗಿ ರ‍್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ರ‍್ಕಾರ ನೇಮಿಸಿದ್ದು, ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ&ಹೈಬ್ರಿಡ್​ ಪ್ರತಿ ಕ್ವಿಂಟಾಲ್​ಗೆ ೩೩೭೧ ರೂ. ಹಾಗೂ ಬಿಳಿಜೋಳ ಪ್ರತಿ ಕ್ವಿಂಟಾಲ್​ಗೆ ೩೪೨೧ ರೂ. ದರ ನಿಗದಿಯಾಗಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್​ಗೆ ೨೩೦೦ ರೂ., ಭತ್ತ ಗ್ರೇಡ್​&ಎ ಪ್ರತಿ ಕ್ವಿಂಟಾಲ್​ಗೆ ದರ ೨೩೨೦ ರೂ. ಇರುತ್ತದೆ. ರೈತರು ತಾವು ಬೆಳೆದ ಭತ್ತ ಮತ್ತು ಜೋಳವನ್ನು ಮಾರಾಟ ಮಾಡಲು ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವ ಐಡಿ ಮತ್ತು ಆಧಾರ್​ ಕರ‍್ಡ್​ನ ಪ್ರತಿಯೊಂದಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಏ.೧ರಿಂದ ಮೇ ೩೧ರವರೆಗೆ ನೋಂದಾಯಿತ ರೈತರಿಂದ ಜೋಳ ಖರೀದಿಸಲಾಗುತ್ತದೆ. ಮಾ.೨೯ರಿಂದ ಏ.೨೫ರವರೆಗೆ ಭತ್ತ ಖರೀದಿಗೆ ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಮೇ ೩೧ರವರೆಗೆ ಭತ್ತ ಖರೀದಿಸಲಾಗುತ್ತದೆ. ಮಾಹಿತಿಗೆ ದೂ.೦೮೪೭೨&೨೫೪೯೮೪, ಮೊ. ೯೪೪೮೪೯೬೦೨೩ ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net