ಜೈಲಿನಲ್ಲಿದ್ದ ಪತಿಗೆ ಗಾಂಜಾ ತೆಗೆದುಕೊಂಡ ಹೋದ ಪತ್ನಿ!

Published on


ಕಲಬುರಗಿ : ನಗರದ ಹೊರವಲಯದಲ್ಲಿರುವ ಸೆಂಟ್ರಲ್ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರಿಗೆ ಭೇಟಿಯಾಗಲು ಹೋಗಿದ್ದ ಪತ್ನಿ ಗಾಂಜಾ ಕೊಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಸುನೀತಾ ಎಂಬುವರೇ ಪತಿಗೆ  ನಿಷೇಧಿತ ಗಾಂಜಾವನ್ನು ಕೊಡಲು ಯತ್ನಿಸಿದವರು.
ಜಾಲೇಂದ್ರನಾಥ ಕಾವಳೆ ಎಂಬ  ವಿಚಾರಣಾಧೀನ ಕೈದಿ ಕೇಂದ್ರ ಕಾರಾಗೃಹದಲ್ಲಿದ್ದು, ಅವರ ಪತ್ನಿ ಸುನೀತಾ ಪತಿಯನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದರು. ಜೀನ್ಸ್ ಪ್ಯಾಂಟಿನ ಬೆಲ್ಟ್ನೊಳಗೆ ಗಾಂಜಾ ಇಟ್ಟು ಹೊಲಿಗೆ ಹಾಕಿ ಮುಚ್ಚಿದ್ದರು. ಅದನ್ನು ಜೈಲಿನ ಸಿಬ್ಬಂದಿ ತಪಾಸಣೆ ಮಾಡುವ ಪತ್ತೆ ಹಚ್ಚಿದ್ದಾರೆ. ಗಾಂಜಾ ಇರುವುದು ಗೊತ್ತಾಗುತ್ತಲೇ ಸುನೀತಾ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಕುರಿತು ಕಾರಾಗೃಹ ಅಧೀಕ್ಷಕರು ದೂರು ನೀಡಿದ್ದಾರೆ. ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net