ಜೈಲಾಧಿಕಾರಿಗಳಿಗೆ ಕೈದಿ ಬ್ಲಾಕ್‌ ಮೇಲ್

GLB_Central Presion Jail
Published on

ಕಲಬುರಗಿ: ಕೈದಿಗಳ ರಾಜಾತಿಥ್ಯ ಪ್ರಕರಣ ಹೊರಬಂದ ಬೆನ್ನಲ್ಲೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಶಂಕಿತ ಭಯೋತ್ಪಾದಕ ಕೈದಿಯು ವಿಡಿಯೋ, ಆಡಿಯೋಗಳ ಮೂಲಕ ಜೈಲಾಧಿಕಾರಿಗಳು, ಸಹ ಕೈದಿಗಳನ್ನೇ ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ಥನೊಬ್ಬ ತನ್ನ ಸಹೋದರನಿಗೆ ಕರೆ ಮಾಡಿದ ಆಡಿಯೋ ವೈರಲ್ ಆಗಿದೆ.
ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಭಯೋತ್ಪಾದಕ, ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಜುಲ್ಫಿಕರ್ ಮತ್ತು ಬಚ್ಚನ ಎನ್ನುವ ಅಪರಾಧಿಗಳು ಜೈಲಾಧಿಕಾರಿಗಳು, ಸಹ ಕೈದಿಗಳಿಗೆ ಬ್ಲಾಕ್‌ಮೇಲ್ ಮಾಡಿ, ಅವರಿಂದ ಕೆಲಸ ಮಾಡಿಸಿದ, ಹಣ ವಸೂಲಿ ಮಾಡಿದ್ದು, ಆಡಿಯೋದಲ್ಲಿ ಬಹಿರಂಗವಾಗಿದೆ.
ಕೈದಿ ಸಾಗರನು ತನ್ನ ಸಹೋದರ ಅಯ್ಯಪ್ಪನ ಜತೆಗೆ ಮಾತನಾಡುವ ಆಡಿಯೋ ಲೀಕ್ ಆಗಿದೆ. ಕೈದಿಗಳಾದ ಜುಲ್ಫಿಕರ್ ಮತ್ತು ಬಚ್ಚನ ಸ್ಮಾರ್ಟ್ ಫೋನ್ ಹೊಂದಿದ್ದು, ಅದನ್ನು ಬಳಸಲು ಜೈಲಿನ ಸಿಬ್ಬಂದಿಗೆ ಹಣ ಕೊಡುತ್ತಿದ್ದ. ಹಣ ಕೊಡುವ ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಬಳಸಿ ೧೦ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಜುಲ್ಫಿಕರ್ ಜತೆಗೆ ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್ ಸಾಥ್ ನೀಡಿದ್ದಾನೆ ಎನ್ನುವುದು ಆಡಿಯೋದಲ್ಲಿ ಬಹಿರಂಗವಾಗಿದೆ.
ಸ್ಮಾರ್ಟ್ಫೋನ್ ಬಳಸುತ್ತಿದ್ದ ಉಗ್ರ ಜುಲ್ಫಿಕರ್ ಕೈದಿಗಳಿಗೆ ಮೊಬೈಲ್ ಬಳಸಲು ಕೊಡುತ್ತಿದ್ದ. ವಿಡಿಯೋ ಕಾಲ್‌ಗೆ ಮತ್ತು ಆಡಿಯೋ ಕಾಲ್‌ಗೆ ಪ್ರತ್ಯೇಕ ದರ ಫಿಕ್ಸ್ ಮಾಡಿದ್ದ. ವಿಡಿಯೋ ಕಾಲ್ ಮಾಡಿ ಮಾತನಾಡುವುದನ್ನು ಸ್ಕಿöçÃನ್ ರೆಕಾರ್ಡ್, ಆಡಿಯೋ ಕಾಲ್ ರೆಕಾರ್ಡ್ ಮಾಡುತ್ತಿದ್ದ. ಅದನ್ನು ಇಟ್ಟುಕೊಂಡು ೫೦ ಸಾವಿರ ರೂ. ಕೇಳುತ್ತಿದ್ದಾನೆ ಎಂದು ಕೈದಿ ಸಾಗರ ತನ್ನ ಸಹೋದರನಿಗೆ ಫೋನ್‌ನಲ್ಲಿ ತಿಳಿಸಿದ್ದಾನೆ.
ಜುಲ್ಫಿಕರ್ ೫೦ ಸಾವಿರ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಸಾಗರ ಕುಟುಂಬಸ್ಥರ ಬಳಿ ಅಳಲು ತೋಡಿಕೊಂಡಿದ್ದಾನೆ. ಹಣ ಕೊಡಲಿಲ್ಲವೆಂದರೆ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ನನ್ನ ಜೀವನಕ್ಕೆ ಏನೇ ಆದರೂ ಜುಲ್ಫಿಕರ್ ಕಾರಣ ಎಂದು ಸಾಗರ ಅಳಲು ತೋಡಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net