ಜೂಜಾಡುತ್ತಿದ್ದ ಮೂವರ ಬಂಧನ, ಇಬ್ಬರು ಪರಾರಿ

Published on

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಜಹೊಸಹಳ್ಳಿ ಕೆರೆ ಅಂಗಳದಲ್ಲಿ ಜೂಜಾಡುತ್ತಿದ್ದವರ ಮೇಲೆ ಎಎಸ್‌ಐ ಮತ್ತು ಸಿಬ್ಬಂದಿ ಗುರುವಾರ ದಾಳಿ ನಡೆಸಿ ಮೂವರನ್ನು ಬಂಧಿಸಿ, 2 ಸಾವಿರ ನಗದು ವಶಪಡಿಸಿಕೊಂಡಿದ್ದು, ಇಬ್ಬರು ಪರಾರಿಯಾಗಿದ್ದಾರೆ. ನಾರೆಪ್ಪ(38), ಲಿಂಗರಾಜು (54) ಗಂಗುಲಪ್ಪ (42) ಬಂಧಿತರು. ಮಧು (40), ರಾಧಾಕೃಷ್ಣ (55) ಪರಾರಿಯಾಗಿದ್ದಾರೆ. ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net