

ಬಾಗಲಕೋಟೆ: ಬಾಗಲಕೋಟೆ ನಗರದ ಮಹಾಂತೇಶ್ ಚೊಳಚಗುಡ್ಡ ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ ದೇಸಾಯಿ ಚಿತ್ರ ಇದೇ ಜೂನ್ ೨೧ ರಂದು ರಾಜ್ಯಾದ್ಯಂತ ಒಂದು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಚಿತ್ರ ಬಿಡುಗಡೆ ಕುರಿತು ಮಂಗಳವಾರ ಬಾಗಲಕೋಟೆ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ಹರವಿದ ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ, ಇದೊಂದು ಕುಟುಂಬ ಸಮೇತವಾಗಿ ವೀಕ್ಷಿಸಬಹುದಾದ ಪಕ್ಕಾ ಮನರಂಜನೆಯ ಚಿತ್ರ ಇದಾಗಿದೆ. ಚಿತ್ರಕತೆಯು ತಂದೆ-ಮಕ್ಕಳ ಸಂಬಂಧ ಕುರಿತಾಗಿದೆ. ಚಿತ್ರವನ್ನು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಸುಂದರ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ ಎಂದರು.
ಚಿತ್ರದಲ್ಲಿ ನಟ ಪ್ರವೀಣಕುಮಾರ, ನಟಿ ರಾಧ್ಯಾ ಮಧುಸೂದನ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ೪೦ಕ್ಕೂ ಹೆಚ್ಚು ಪ್ರಮುಖ ಕಲಾವಿದರು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಮಾಜಿ ಡಿಸಿಎಂ ಲಕ್ಷ÷್ಮಣ ಸವದಿ ಅವರು ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಾಗಿರಡ್ಡಿ ಭಡ ಅವರ ನಿರ್ದೇಶನ ಮಾಡಿದ್ದು, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಸಾಯಿಕಾರ್ತಿಕ್ ಅವರು ಸಂಗೀತ ನೀಡಿದ್ದಾರೆ ಎಂದು ವಿವರಿಸಿದರು.
ಚಿತ್ರಕ್ಕೆ ಲೆಕ್ಕಹಾಕಿದ್ದ ಬಜೆಟ್ ಮೀರಿ ಹೋಗಿದೆ. ಮೂರು ಕೋಟಿ ರೂ.ಗಳಲ್ಲಿ ಚಿತ್ರ ಸಂಪೂರ್ಣ ಮುಗಿಯುತ್ತದೆ ಎಂದುಕೊಂಡಿದ್ದೇವು. ಆದರೆ, ಉತ್ತರ ಕರ್ನಾಟಕದಲ್ಲೆ ಹೆಚ್ಚು ಚಿತ್ರೀಕರಣ ಮಾಡಿದ್ದರಿಂದ ಖರ್ಚು ಅಽಕವಾಗಿ ಬಜೆಟ್ ಹೆಚ್ಚಾಯಿತು. ಆದರೂ ಸಹ ಒಂದೊಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ ಎನ್ನುವ ಸಂತೋಷ ಇದೆ. ಇಲ್ಲಿನ ಜನರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಇದೇ ಶುಕ್ರವಾರ ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ ೧೦೦ಕ್ಕೂ ಅಽಕ ಚಿತ್ರಮಂದಿರಗಳಲ್ಲಿ ದೇಸಾಯಿ ಬಿಡುಗಡೆ ಆಗಲಿದ್ದು, ಆಗಲೂ ಸಹ ಪ್ರೇಕ್ಷಕರು ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಣ್ಣೂರ ಮಠದ ವಿಶ್ವರಾಜೇಂದ್ರ ಸ್ವಾಮೀಜಿ, ದೇಸಾಯಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭಹಾರೈಸಿದರು. ಬಸವರಾಜ್ ಯಂಕಂಚಿ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡರು. ಕುಮಾರ ಯಳ್ಳಿಗುತ್ತಿ, ಅಶೋಕ ಲಾಗಲಕೋಟೆ ಇದ್ದರು.