ಜು.೬ ರಂದು ಬಾಗಲಕೋಟೆ ಲಯನ್ಸ್ ಸಂಸ್ಥೆ ಪದಗ್ರಹಣ

bkt-4-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಾಗಲಕೋಟೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ ಮಾತನಾಡಿದರು. ಲಯನ್ಸ್ ಬ್ರ‍್ಯಾಂಚ್ ಕ್ಲಬ್ ಅಧ್ಯಕ್ಷತೆ ತೃಪ್ತಿ ದರ್ಬಾರ ಮತ್ತು ಕಾರ್ಯದರ್ಶಿ ದೀಪಾ ಎಂ. ಶೀಲವಂತ, ಸಂಜು ಪಾಟೀಲ, ಚನ್ನಬಸಪ್ಪ ದಂಡಿನ , ಸ್ನೇಹಾ ಇಂಜಗನೇರಿ ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಲಯನ್ಸ್ ಸಂಸ್ಥೆಗೆ ೨೦೨೫-೨೦೨೬ನೇ ಸಾಲಿನ ಅಧ್ಯಕ್ಷರಾಗಿ ಡಿಂಕೇಶ್ ಬರಾಣಪುರ, ಕಾರ್ಯದರ್ಶಿಯಾಗಿ ಸಂಜೀವ ಪಾಟೀಲ್, ಖಜಾಂಚಿಯಾಗಿ ಚನ್ನಬಸಪ್ಪ ದಂಡಿನ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.೬ ರಂದು ಸಂಜೆ ೬ ಗಂಟೆಗೆ ಸಿ.ವಿ. ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಂಧ್ಯಾ ಶೆನೈ, ಜಿಲ್ಲಾ ಗವರ್ನರ್ ಜೈಮೋಲ ನಾಯಕ, ಜಿಲ್ಲಾ ಸೆಕ್ರೆಟರಿ ಡಾ. ಕೀರ್ತಿ ನಾಯಕ ಅವರು ಆಗಮಿಸಲಿದ್ದಾರೆ ಎಂದರು.

ನೂತನ ಅಧ್ಯಕ್ಷ ಡಿಂಕೇಶ್ ಬರಾಣಾಪುರ ಮಾತನಾಡಿ, ಈ ವರ್ಷವೂ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಹಿಂದಿನ ಕಾರ್ಯಕ್ರಮಗಳ ಜೊತೆಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಆರೋಗ್ಯಕ್ಕೆ ಸಂಬಂಽಸಿದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಣ್ಣಿನ ತಪಾಸಣೆ ಹಾಗೂ ಆಪರೇಷನ್ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ಮತ್ತು ಅದಕ್ಕೆ ಉತ್ತಮ ಚಿಕಿತ್ಸೆ ನೀಡುವುದು ಅದೇ ರೀತಿ ಎಲ್ಲರಿಗೂ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗುವುದು. ಹೀಗೆ ಹತ್ತು ಹಲವಾರು ಆರೋಗ್ಯಕ್ಕೆ ಸಂಬಂಽಸಿದ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಲಯನ್ಸ್ ಸಂಸ್ಥೆ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಹುನಗುಂದದಲ್ಲಿ ಈ ವರ್ಷ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಲು ತೀರ್ಮಾನಿಸಿದ್ದು, ಇದು ಪೂರ್ಣ ಉಚಿತ ಆಸ್ಪತ್ರೆಯಾಗಿ ಸೇವೆ ನೀಡಲಿದೆ. ಬಾಗಲಕೋಟ ಲಯನ್ಸ್ ಸಂಸ್ಥೆಯು ಇದರ ಉಸ್ತುವಾರಿ ವಹಿಸಲಿದೆ. ಅದೇ ರೀತಿ ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಅದರಂತೆ ನಿಸರ್ಗದತ್ತ ಕಾಳಜಿ ವಹಿಸಿ ಅನೇಕ ಗಿಡ ನೆಡುವ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಈ ವರ್ಷ ಪೂರ್ಣ ಹತ್ತು ಹಲವಾರು ಸಮಾಜಸೇವೆ, ಸಮಾಜಮುಖಿ ಮತ್ತು ಜನಪರ ಕಾರ್ಯಗಳನ್ನು ನಡೆಸಲಾಗುವುದು. ಸಮಾಜದಲ್ಲಿನ ಕಡುಬಡವರಿಗೆ ಮತ್ತು ಅವಶ್ಯಕತೆ ಇರುವ ಯಾರೇ ಆಗಿರಲಿ ಅವರ ಸಹಾಯಕ್ಕೆ ಲಯನ್ ಸಂಸ್ಥೆಯು ಯಾವಾಗಲೂ ತನ್ನ ಕೈ ಚಾಚಿರುತ್ತದೆ ಎಂದರು.

ಈ ವರ್ಷ ಲಯನ್ಸ್ ಬ್ರ‍್ಯಾಂಚ್ ಕ್ಲಬ್ ಅಧ್ಯಕ್ಷತೆ ತೃಪ್ತಿ ದರ್ಬಾರ ಮತ್ತು ಕಾರ್ಯದರ್ಶಿ ದೀಪಾ ಎಂ. ಶೀಲವಂತ ಅವರು ಕೂಡ ಅಽಕಾರ ಸ್ವೀಕರಿಸಲಿದ್ದಾರೆ. ಬ್ರ‍್ಯಾಂಚ್ ಕ್ಲಬ್‌ನಿಂದ ಕೂಡ ಅನೇಕ ಜನ ಸೇವಾ ಕಾರ್ಯಗಳನ್ನು ನೆರವೇರಿಸಲಾಗುವುದು. ಮಹಿಳೆಯರಿಗಾಗಿ ಆರೋಗ್ಯ, ಕ್ಯಾನ್ಸರ್, ರಕ್ತ ತಪಾಸಣೆ ಮತ್ತು ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದಾಗಿ ತಿಳಿಸಿದರು.

ಸಂಸ್ಥೆಯ ಪದಾಽಕಾರಿಗಳಾದ ನೂತನ ಕಾರ್ಯದರ್ಶಿ ಸಂಜು ಪಾಟೀಲ, ಚನ್ನಬಸಪ್ಪ ದಂಡಿನ , ಸ್ನೇಹಾ ಇಂಜಗನೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net