

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ದೊರೆಯುವ ಉದ್ದೇಶದಿಂದ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಸ್ಥಾಪಿಸಲಾಗಿರುವ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಜು.೩೧ ರಂದು ಲೋಕಾರ್ಪಾಣೆಗೊಳ್ಳಲಿದೆ ಎಂದು ಮಾಜಿ ಸಚಿವ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಸೋಮವಾರ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦.೩೦ ಗಂಟೆಗೆ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿರಹಟ್ಟಿ -Àಕೀರೇಶ್ವರ ಭಾವೈಕ್ಯತಾ ಪೀಠದ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದರು.
ವೈದ್ಯಕೀಯ ಮಹಾವಿದ್ಯಾಲಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ೬೩೦ ಹಾಸಿಗೆ ಸಾಮರ್ಥ್ಯದ ನವೀಕೃತ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ, ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿರುವ ನಿಮ್ಮನ್ನು ಹೆತ್ತವರು ಮಂದಿರವನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ. ಶಸö ಚಿಕಿತ್ಸಾ ಕೊಠಡಿಗಳನ್ನು ಸಂಸದ ಪಿ.ಸಿ.ಗದ್ದಿಗೌಡರ, ರಕ್ತ ಭಂಡಾರ ನಾರಾಯಣಸಾ ಭಾಂಡಗೆ, ಗ್ರಂಥಾಲಯ ಶಾಸಕ ಜೆ.ಟಿ.ಪಾಟೀಲ, ಸಿ.ಟಿ.ಸ್ಕ್ಯಾನ ಸೆಂಟರ್ ಪಿ.ಎಚ್.ಪೂಜಾರ ಉದ್ಘಾಟಿಸಲಿದ್ದಾರೆ ಎಂದರು
ವಿ.ಪ ಸದಸ್ಯ ಹನುಮಂತ ನಿರಾಣಿ, ಬೆಂಗಳೂರಿನ ರಾಜೀವ ಗಾಂಽ ಕುಲಪತಿ ಡಾ.ಎಂ.ಕೆ.ರಮೇಶ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ರಾಜುರಾಜೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ನವೀನ ಎಸ್., ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ಬಾಪೂಜಿ ಪತ್ತಿನ ಸಹಕಾರಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಎಸ್.ಸಿ.ಮೋಟಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಅಖಂಡ ವಿಜಯಪುರ ಹಾಗೂ ಬಾಗಲಕೋಟೆ ಜಿ¯್ಲೆಯಲ್ಲಿ ಇದು ೪ನೇ ವೈದ್ಯಕೀಯ ಮಹಾವಿದ್ಯಾಲಯವಾಗಿದೆ. ಮಹಾತಾ ್ಮ ಗಾಂಽÃಜಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಆದರ್ಶವನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವೆ. ಪಟ್ಟಣ ಜನ ಗ್ರಾಮೀಣ ಭಾಗದತ್ತ ನೋಡಬೇಕು. ಗ್ರಾಮೀಣ ಜನರು ಪಟ್ಟಣದತ್ತ ಮುಖ ಮಾಡಬಾರದು. ಬಾಡಗಂಡಿ ಸುತ್ತಮುತ್ತಲೀನ ೪೦೦ ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಒಳ್ಳೆಯ ವೈದ್ಯಕೀಯ ಶಿಕ್ಷಣ ಸಿಗಲಿ ಎನ್ನುವ ಆಶಯದೊಂದಿಗೆ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ.
ಜು.೩೧ ರಂದು ನನ್ನ ಜನುಮ ದಿನ ಇದೆ. ೭೫ ವರ್ಷ ತುಂಬುತ್ತದೆ. ಮುಖಂಡರು, ಅಭಿಮಾನಿಗಳು, ಹಿತೈಷಿಗಳು ಶಾಲು, ಹಾರು ತರಬೇಡಿ. ಜನುಮ ದಿನ ಅಂಗವಾಹಿ ನಮ್ಮ ಭಾಗದ ಜನರಿಗೆ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿ ಊಡುಗೊರೆ ನೀಡುತ್ತಿದ್ದೇನೆ. ವ್ಯಾಪಾರಿಕರಣ ಉದ್ದೇಶಿದಿಂದ ಕಾಲೇಜು ಸ್ಥಾಪಿಸಿಲ್ಲ. ಗ್ರಾಮ ಸ್ವರಾಜ್ಯ ಪರಿಕಲ್ಪನೆಯಲ್ಲಿ ಸೇವೆ ಮಾಡುತ್ತಿದ್ದಾನೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, ಎಸ್.ಆರ್.ಪಾಟೀಲ ನುಡಿದಂತೆ ನಡೆಯುವ ವ್ಯಕ್ತಿ. ತಮ್ಮ ನಂಬಿದ ಜನರಿಗೆ ತಮ್ಮ ಜೀವನ ಮುಡುಪಾಗಿ ಇಟ್ಟಿದ್ದಾರೆ. ಗಾಂಽÃಜಿ ಹಾಗೂ ಕಲಾಂ ಅವರ ಆದರ್ಶ ನನಸು ಮಾಡಲು ಶ್ರಮಿಸುತ್ತಿದ್ದಾರೆ. ಅವರೊಬ್ಬ ಽಮಂತ ನಾಯಕ ಎಂದು ಬಣ್ಣಿಸಿದರು.
ವೈದ್ಯಕೀಯ ಕಾಲೇಜಿನ ಡೀನ ಡಾ.ಧರ್ಮರಾಯ ಇಂಗಳೆ, ಅಽÃಕ್ಷಕ ಡಾ.ವಿಜಯಾನಂದ ಹಳ್ಳಿ ಇದ್ದರು.