ಜು.೩೦ ರಿಂದ ಆಧ್ಯಾತ್ಮಿಕ ಪ್ರವಚನ

bkt-27-3
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಎ.ಎಸ್.ಪಾವಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮುಕ್ಕುಪ್ಪಿ, ಜಿ.ಎಂ.ಹಿರೇಮಠ, ಎಸ್.ಎಸ್. ಗದಗಿ, ಎಸ್.ಎಚ್.ಶೆಟ್ಟರ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಬಾಗಲಕೋಟ ಗೆಳೆಯರ ಬಳಗ, ಶಿವಾನುಭವ ಸಮಿತಿಯಿಂದ ಬದುಕು ಬೆಳಕಿನತ್ತ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಜು.೩೦ ರಿಂದ ಮೂರು ದಿನಗಳ ಕಾಲ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಗೆಳೆಯರ ಬಳಗದ ಅಧ್ಯಕ್ಷ ಮಹಾಬಳೇಶ್ವರ ಗುಡಗುಂಟಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಪ್ರತಿನಿತ್ಯ ಸಂಜೆ ೬ ಗಂಟೆಗೆ ಪಾವಗಡ ಪ್ರಕಾಶ ಪ್ರವಚನ ನೀಡಲಿದ್ದಾರೆ. ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪನಿಷತ್ ದರ್ಶನ, ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ದರ್ಶನಕ್ಕಾಗಿ ಪರೀಕ್ಷೆ/ಸಾಧನೆ, ಹರಿಶ್ಚಂದ್ರ ಕಾವ್ಯದಲ್ಲಿ ಶಿವ ಸಾಕ್ಷಾತ್ಕಾರ ಕುರಿತು ಪ್ರವಚನ ನಡೆಸಿಕೊಡಲಿದ್ದಾರೆ ಎಂದರು.

ಮುಖಂಡರಾದ ಎ.ಎಸ್.ಪಾವಟೆ ಬಸವರಾಜ ಮುಕ್ಕುಪ್ಪಿ, ಜಿ.ಎಂ.ಹಿರೇಮಠ, ಎಸ್.ಎಸ್. ಗದಗಿ, ಎಸ್.ಎಚ್.ಶೆಟ್ಟರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net