ಜು.೨೯ ರಂದು ದತ್ತಿ ಉಪನ್ಯಾಸ ಕಾರ್ಯಕ್ರಮ

bkt-27-3
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಎ.ಎಸ್.ಪಾವಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮುಕ್ಕುಪ್ಪಿ, ಜಿ.ಎಂ.ಹಿರೇಮಠ, ಎಸ್.ಎಸ್. ಗದಗಿ, ಎಸ್.ಎಚ್.ಶೆಟ್ಟರ ಉಪಸ್ಥಿತರಿದ್ದರು
Published on

ಬಾಗಲಕೋಟೆ: ನಿರ ವಲಯ ಪಥಿಕ ಎಚ್.ಜಿ.ಮೃತ್ಯುಂಜಯ ಸ್ಮಾರಕ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜು.೨೯ ರಂದು ಸಂಜೆ ೬ ಗಂಟೆಗೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಎ.ಎಸ್.ಪಾವಟೆ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಯರನಾಳ-ಉಕ್ಕಲಿ ಗುರುಸಂಗನ ಬಸವ ಸ್ವಾಮೀಜಿ, ಅಡವಿಸಿದ್ದೇಶ್ವರ ಮಠದ ನಿರುಪಾಧೀಶರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಅದ್ವೈತ ಮಹಾ ಮಂಡಲಾಧ್ಯಕ್ಷ ಪ್ರವಚನ ಭಾಸ್ಕರ ಡಾ.ಪಾವಗಡ ಪ್ರಕಾಶ ರಾವ್ "ವಚನಾದ್ರಿಯ ಗೌರೀಶಂಕರ ಅಲ್ಲಮ" ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರತಿ ವರ್ಷ ಜು. ೨೯ ರಂದು ನಡೆಯುವ ಲಿಂ.ಎಚ್.ಜಿ. ಮೃತ್ಯುಂಜಯ ಸ್ಮರಣೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ದತ್ತಿ ಉಪನ್ಯಾಸ ಏರ್ಪಡಿಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿ ಸಲಾಗುತ್ತಿದೆ. ೨೦೨೪ನೇ ಸಾಲಿನಲ್ಲಿ ಗದ್ಯ ಸಾಹಿತ್ಯ, ಷಟ್ಪದಿ ಸಾಹಿತ್ಯ ಕಾವ್ಯಗಳನ್ನು ಕನ್ನಡ ಹಿಂದಿ ಭಾಷೆಗಳಲ್ಲಿ ರಚಿಸಿದ ಜಮಖಂಡಿ ತಾಲೂಕಿನ ಮರೇಗುದ್ದಿ ಅಡವಿ ಸಿದ್ದೇಶ್ವರ ಮಠದ ಮ.ನಿ.ಪ್ರ. ನಿರುಪಾಧೀಶ್ವರ ಸ್ವಾಮೀಜಿ ಅವರಿಗೆ ಅಧ್ಯಾತ್ಮ ಸಾಹಿತ್ಯ ದೀಪಕ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.

ಆಹಾರ ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಹಿತ್ಯ ರಚಿಸಿ, ಅನೇಕ ಚಿಂತನಪರ ಲೇಖನಗಳಿಂದ ಜನ ಮನ್ನಣೆ ಪಡೆದ ಬೆಂಗಳೂರಿನ ದಿ. ಕೆ.ಸಿ. ರಘು ಇವರಿಗೆ ಮರಣೋತ್ತರವಾಗಿ ಆಹಾರ ವಿಜ್ಞಾನ ಸಾಹಿತ್ಯ ದೀಪಕ ಪ್ರಶಸ್ತಿಯನ್ನು ಅವರ ಪತ್ನಿ ದೀಪಾ ರಘು ಗೆ ನೀಡಲಾಗುವುದು ಎಂದರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮುಕ್ಕುಪ್ಪಿ, ಜಿ.ಎಂ.ಹಿರೇಮಠ, ಎಸ್.ಎಸ್. ಗದಗಿ, ಎಸ್.ಎಚ್.ಶೆಟ್ಟರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net