

ಬಾಗಲಕೋಟೆ: ಲಯನ್ಸ್ ಕ್ಲಬ್ ಬಾಗಲಕೋಟೆ ನೂತನ ಪದಾಽಕಾರಿಗಳ ಪದಗ್ರಹಣ ಸಮಾರಂಭ ಜು.೧೩ ರಂದು ಸಂಜೆ ೬ ಗಂಟೆಗೆ ಸಿ.ವಿ.ಚರಂತಿಮಠ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೪-೨೫ ನೇ ಸಾಲಿನ ಲೈನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಸಿದ್ದಣ್ಣ ಹಂಪನ ಗೌಡರ, ಕಾರ್ಯದರ್ಶಿಯಾಗಿ ವಿಶ್ವನಾಥ ಗುಳೇದ, ಖಜಾಂಚಿಯಾಗಿ ಹನುಮಂತ ದೊಡಮನಿ ಅಽಕಾರ ಸ್ವೀಕರಿ ಸುವರು ಎಂದರು.
ಅನೇಕ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿದ್ದು, ಆರೋಗ್ಯ ಜಾಗೃತಿ, ಉಚಿತ ಕಣ್ಣಿನ ತಪಾಸಣಾ ಶಿಬಿರ, ಕ್ಯಾನ್ಸರ್ ರೋಗದ ಜಾಗೃತಿ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸಲು ತೀರ್ಮಾನಿಸಿದ್ದೇನೆ. ಪರಿಸರ ರಕ್ಷಣೆಗೆ ಒತ್ತು, ಸಸಿ ನೆಡುವ ಕಾರ್ಯಕ್ರಮ, ಪರಿಸರ ಜಾಗೃತಿ ಮೂಡಿಸಲು ಜಾಥಾ ಏರ್ಪಡಿಸಲಾಗುವುದು ಎಂದರು.
ಶೈಕ್ಷಣಿಕ ರಂಗಕ್ಕೆ ಸಂಬಂಽಸಿದಂತೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಕಾಲೇಜ್ ವಿದ್ಯಾರ್ಥಿನಿಯರಿಗೆ ಶುಚಿತ್ವದ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಕಡು ಬಡ ವಿದ್ಯಾರ್ಥಿಗಳಿಗೆ ಕಾಲೇಜ್ ಶುಲ್ಕವನ್ನು ಭರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಮಹಿಳಾ ಬ್ರಾಂಚ್ ಕ್ಲಬ್ಬಿನ್ ಅಧ್ಯಕ್ಷರಾಗಿ ನೇಹಾ ಇಂಜಗಣೇರಿ, ಕಾರ್ಯದರ್ಶಿಯಾಗಿ ಉಮಾ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದು, ನೂತನ ಸದಸ್ಯರು ಉತ್ಸುಕತೆಯಿಂದ ಕಾರ್ಯಕ್ರಮ ನಡೆಸಲಿದ್ದಾರೆ. ಬಡ ಮಹಿಳೆಯರನ್ನು ಸಬಲೀಕರಣ ಗೊಳಿಸುವುದಕ್ಕಾಗಿ ಅನೇಕ ವ್ಯಕ್ತಿತ್ವ ವಿಕಸ ಕಾರ್ಯಕ್ರಮಗಳ ಮೂಲಕ ಹೊಲಿಗೆ ತರಬೇತಿ, ಉದ್ಯೋಗ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ತಮ್ಮ ಜೀವನವನ್ನು ನಡೆಸಬಹುದು. ಬ್ರಾಂಚ್ ಕ್ಲಬ್‌ನ ಮಹಿಳಾ ಸದಸ್ಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರ ಆರೋಗ್ಯ ಜಾಗೃತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಆಚರಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆನಂದ ಜಿಗಜಿನ್ನಿ, ವಿಶ್ವನಾಥ ಗುಳೇದ, ಉಮಾ ಪಟ್ಟಣಶೆಟ್ಟಿ, ಹನಮಂತ ದೊಡಮನಿ, ಶಿವರಾಜ ಪಾಟೀಲ ಇತರರು ಇದ್ದರು.